ಕೆಲಸ ಕೊಟ್ಟ ಮಾಲೀಕನ 4 ವರ್ಷದ ಮಗಳನ್ನು ಕಿಡ್ನಾಪ್ ಮಾಡಿದ ನೌಕರ

Views: 81
ಬೆಂಗಳೂರು: ಫರ್ನಿಚರ್ ಶಾಪ್ ಮಾಲೀಕನ 4 ವರ್ಷದ ಮಗಳಿಗೆ ಚಾಕೊಲೆಟ್ ಕೊಡಿಸುತ್ತೇನೆಂದು ಕರೆದುಕೊಂಡು ಹೋಗಿ ಕಿಡ್ನಾಪ್ ಮಾಡಿದ ಘಟನೆ ಬನಶಂಕರಿಯ ಕಾವೇರಿಪುರದಲ್ಲಿ ನಡೆದಿದೆ.
ಆರೋಪಿ ವಸೀಂ ಮಗುವನ್ನು ಕಿಡ್ನಾಪ್ ಮಾಡಿ ತಲೆಮರೆಸಿಕೊಂಡಿದ್ದಾನೆ. ಫರ್ನಿಚರ್ ಶಾಪ್ ಮಾಲೀಕ ಶಫೀವುಲ್ಲಾ ಪತ್ನಿಯಿಂದ ವಿಚ್ಚೇಧನ ಪಡೆದು ಮಗಳೊಂದಿಗೆ ವಾಸವಾಗಿದ್ದಾರೆ. ಆರೋಪಿಯು ಇತ್ತೀಚೆಗೆ ಕೆಲಸ ಬಿಟ್ಟು ಹೋಗಿದ್ದ. ಆದರೆ ಮತ್ತೆ ಕೆಲಸ ಕೊಡಿ ಎಂದು ಕಣ್ಣೀರು ಹಾಕಿ ಅಂಗಲಾಚಿ ಮಾಲೀಕನಿಂದ ಕೆಲಸ ಗಿಟ್ಟಿಸಿಕೊಂಡಿದ್ದ.
ಕಣ್ಣೀರು ಹಾಕಿದ್ದರಿಂದ ಮಾಲೀಕ ಆರೋಪಿಗೆ ಮತ್ತೆ ಕೆಲಸ ಕೊಟ್ಟಿದ್ದ. ಬೆಳಗ್ಗೆ ಕೆಲಸಕ್ಕೆ ಸೇರಿ ಮಧ್ಯಾಹ್ನ ಮಾಲೀಕನ ಮಗಳಿಗೆ ಚಾಕೊಲೆಟ್ ಕೊಡಿಸುತ್ತೇನೆಂದು ಪುಸಲಾಯಿಸಿ ಕರೆದುಕೊಂಡು ಹೋಗಿ ಕಿಡ್ನಾಪ್ ಮಾಡಿದ್ದಾನೆ. ಈಗ ಎಲ್ಲಿದ್ದಾನೆ ಎಂಬ ಮಾಹಿತಿ ಇಲ್ಲ. ಹೀಗಾಗಿ ಮಗಳನ್ನು ಕಳೆದುಕೊಂಡು ದುಃಖದಲ್ಲಿರುವ ಮಾಲೀಕ ಘಟನೆ ಸಂಬಂಧ ಬನಶಂಕರಿ ಠಾಣೆ ಹಾಗೂ ನಗರದ ಕಮಿಷನರ್ ಬಿ. ದಯಾನಂದ್ ಅವರಿಗೆ ದೂರು ನೀಡಿದ್ದಾರೆ. ಆದಷ್ಟು ಬೇಗ ಮಗುವನ್ನು ಹುಡುಕಿ ಕೊಡುವಂತೆ ಮನವಿ ಮಾಡಿದ್ದಾರೆ.