ಕುಂದಾಪುರ:ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿಯಾಗಿ ನಾಗೂರಿನ ಯುವಕ ಸಾವು

Views: 371
ಕನ್ನಡ ಕರಾವಳಿ ಸುದ್ದಿ: ರೈಲ್ವೇ ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿಯಾಗಿ ಸಾವನ್ನಪ್ಪಿದ ಘಟನೆ ಕಿರಿಮಂಜೇಶ್ವರದ ನಾಗೂರಿನಲ್ಲಿ ಮಂಗಳವಾರ ಸಂಜೆ ನಡೆದಿದೆ.
ಬಿಜೂರು ಗ್ರಾಮದ ದೀಟಿಮನೆ ನಿವಾಸಿ ಮುತ್ತಯ್ಯ ದೇವಾಡಿಗರ ಪುತ್ರ ವಾಸುದೇವ ದೇವಾಡಿಗ ಯಾನೆ ಮಣಿಕಂಠ (25) ಸಾವನ್ನಪ್ಪಿದವರು.
ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದ ವಾಸುದೇವ ದೇವಾಡಿಗ ಸುಮಾರು 5 ಎಕ್ರೆ ಜಾಗದಲ್ಲಿ ಕಲ್ಲಂಗಡಿ ಬೆಳೆದಿದ್ದರು. ಇನ್ನು ಎರಡು ಮೂರು ದಿನದಲ್ಲಿ ಕಲ್ಲಂಗಡಿ ಕಟಾವಿಗೆ ಸಿದ್ಧತೆ ಮಾಡಿದ್ದರು. ನಾಗೂರಿನಲ್ಲಿ ಫೆ.4 ರಂದು ಮಂಗಳವಾರ ಸಂಜೆ ಸೆಂಟ್ರಿಂಗ್ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವ ಸಂದರ್ಭದಲ್ಲಿ ತನ್ನ ವಾಹನವನ್ನು ಕಲ್ಲಂಗಡಿ ಹಣ್ಣಿನ ಲೋಡ್ ಮಾಡಲು ಮತ್ತೊಬ್ಬರಿಗೆ ನೀಡಿದ್ದು, ಅವರು ವಾಹನವನ್ನು ಅವರು ರೈಲ್ವೆ ಹಳಿ ಹತ್ತಿರ ನಿಲ್ಲಿಸಿ ಕಲ್ಲಂಗಡಿ ಹಣ್ಣಿನ ಲೋಡ್ ಮಾಡುತ್ತಿದ್ದವರ ಬಳಿ ಮಾತನಾಡಿ ಹಣ ಕೊಟ್ಟು ಬರುತ್ತೇನೆಂದು ರೈಲ್ವೇ ಹಳಿ ದಾಟಿ ಹೋಗಿ ವಾಪಾಸು ಬರುತ್ತಿದ್ದ ವೇಳೆಯಲ್ಲಿ ಮಂಗಳೂರು ಕಡೆಯಿಂದ ಮಡಗಾಂವ್ ಕಡೆಗೆ ರೈಲು ಬರುತ್ತಿರುವುದನ್ನು ಗಮನಿಸಿದ ವಾಸುದೇವ ತಪ್ಪಿಸಿಕೊಳ್ಳಲು ಯತ್ನಿಸಿ ಹಳಿಯ ಪಕ್ಕಕ್ಕೆ ಸರಿದು ತಿರುಗಿದಾಗ ಮುಖಕ್ಕೆ ರೈಲು ಡಿಕ್ಕಿಯಾಗಿ ತಲೆ ಛಿದ್ರವಾಗಿದೆ.
ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.