ಸಾಂಸ್ಕೃತಿಕ

ಕರಿಮಣಿ ಹಾಡು ಫೇಮಸ್ಸು ಆಗಿದ್ದೇ ಆಗಿದ್ದು ಕಿರುತೆರೆಯಲ್ಲಿ ಹೊಸ ಧಾರಾವಾಹಿ”ಕರಿಮಣಿ”

Views: 86

ಕನ್ನಡ ಕಿರುತೆರೆಯಲ್ಲಿ ಹೊಚ್ಚ ಹೊಸ ಧಾರಾವಾಹಿಗಳು ಎಂಟ್ರಿ ಕೊಟ್ತಿದೆ. ಕಲರ್ಸ್​ ಕನ್ನಡ  ಕಿರುತೆರೆಯ ಪ್ರೇಕ್ಷಕರ ಮುಂದೆ ತಂದಿಡುತ್ತಿದ್ದಾರೆ.

ಇನ್ನು ಈ ಹೊಸ ಕಥೆಯ ಜೊತೆಗೆ ಮತ್ತೊಂದು ಹೊಸ ಕಥೆ ಸದ್ಯದಲ್ಲೇ ಕೈ ಜೋಡಿಸಲಿದೆ.ಅದುವೇ ‘ಕರಿಮಣಿ’ ಧಾರಾವಾಹಿ ಕರಿಮಣಿ ಕತೆಯ ತಿರುಳು ಬಹಳಷ್ಟು ಟ್ವಿಸ್ಟ್​ಗಳನ್ನು ಒಳಗೊಂಡಿದ್ದು ಎಲ್ಲಾ ಕಥೆಗಳಿಗಿಂತ ಭಿನ್ನವಾಗಿದೆಯಂತೆ.

ಕರಿಮಣಿ ಧಾರಾವಾಹಿಯು ಇದೇ ತಿಂಗಳು 19ನೇ ತಾರೀಖಿನಿಂದ ಪ್ರತಿ ದಿನ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.

ಈ ಧಾರಾವಾಹಿಯಲ್ಲಿ ಎರಡು ಮನಸ್ಸುಗಳನ್ನು ಒಂದು ಮಾಡುವ ಈ ‘ಕರಿಮಣಿ’ ಧಾರಾವಾಹಿಯಲ್ಲಿ ನಾಯಕಿ ಹಾಗೂ ನಾಯಕ ಇಬ್ಬರ ಆಲೋಚನೆಗಳು ಡಿಫರೆಂಟ್ ಆಗಿದ್ದು, ಹೇಗೆ ಒಂದಾಗುತ್ತಾರೆ ಎಂಬ ಕುತೂಹಲವಿದೆ. ಯಾಕೆಂದರೆ ಪ್ರೊಮೋದಲ್ಲೇ ನಾಯಕಿ ಸಾಹಿತ್ಯಳ ಮದುವೆ ನಡೆಯುತ್ತಿದ್ದು, ನಾಯಕ ಕರ್ಣ ಈ ಮದುವೆಯನ್ನು ತಡೆಯಬೇಕು ಎಂದು ಹೊರಟಿದ್ದಾನೆ. ಮನೆಗೆ ಹೆಣ್ಣು ಮಗಳ ಪ್ರಾಮುಖ್ಯತೆ ಎಷ್ಟಿರುತ್ತದೆ ಎಂಬುದು ತಿಳಿದಿರುವ ಕರ್ಣ, ಸಾಹಿತ್ಯ ಬಗ್ಗೆ ತಪ್ಪಾಗಿ ತಿಳಿದುಕೊಂಡಿದ್ದು, ಆಕೆ ಕೆಟ್ಟವಳು ಅವಳು ಮದುವೆಯಾಗಿ ಯಾರ ಮನೆಗೂ ಅನ್ಯಾಯವಾಗಬಾರದು ಎಂದಿದ್ದಾನೆ. ಸಾಹಿತ್ಯ ಮತ್ತು ಕರ್ಣ ಇಬ್ಬರ ಸಂಬಂಧವೇನು..? ಇವರಿಬ್ಬರು ಕಥೆ ಏನು ಎಂಬುದು ಧಾರಾವಾಹಿ ಪ್ರಾರಂಭವಾದ ನಂತರವೇ ತಿಳಿಯಬೇಕಿದೆ.

ಇನ್ನು ‘ಕರಿಮಣಿ’ ಧಾರಾವಾಹಿಯಲ್ಲಿ ನಾಯಕಿಯಾಗಿ ಸ್ಪಂದನಾ ಸೋಮಣ್ಣ ನಟಿಸಿದ್ದಾರೆ. ಕಳೆದ ವರ್ಷ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಗೃಹಪ್ರವೇಶ’ ಧಾರಾವಾಹಿಯ ನಾಯಕಿಯೇ ಸ್ಪಂದನಾ ಸೋಮಣ್ಣ. ‘ನಾನು ನನ್ನ ಕನಸು’ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಬಳಿಕ ಪರಭಾಷೆಗೆ ಎಂಟ್ರಿ ಕೊಟ್ಟ ಸ್ಪಂದನಾ ಈಗ ಕಳೆದ ವರ್ಷ ಮತ್ತೆ ಕನ್ನಡ ಕಿರುತೆರೆಗೆ ‘ಗೃಹಪ್ರವೇಶ’ ಧಾರಾವಾಹಿ ಮೂಲಕ ಕಮ್ ಬ್ಯಾಕ್ ಮಾಡಿದರು. ತೆಲುಗಿನ ಹಲವು ಧಾರಾವಾಹಿಗಳಿಗೆ ಸ್ಪಂದನಾ ಸೋಮಣ್ಣ ಬಣ್ಣ ಹಚ್ಚಿದ್ದಾರೆ. ‘ದಿಲ್ ಖುಷ್’, ‘ಮರೀಚಿ’, ‘ಶಟ್ ದ ನಾಯ್ಸ್’ ಎಂಬ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ನಚ್ಚಾವೆ’ ಎಂಬ ತೆಲುಗಿನ ವೆಬ್ ಸಿರೀಸ್ ಹಾಗೂ ಹಿಂದಿಯ ‘ಸುನ್ ಲೆ ನಾ’ ಎಂಬ ಆಲ್ಬಂ ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ.

ಸ್ಪಂದನಾ ಸೋಮಣ್ಣ ಮೂಲತಃ ಮೈಸೂರಿನವರಾಗಿದ್ದು, ಮಾಡೆಲ್ ಕೂಡ ಹೌದು. ಧಾರಾವಾಹಿಗಳಲ್ಲಿ ಹೆಚ್ಚು ಲಂಗ ದಾವಣಿ, ಸೀರೆಯಲ್ಲಿ ಕಾಣಿಸಿಕೊಳ್ಳುವ ಸ್ಪಂದನಾ ಸಿಕ್ಕಾಪಟ್ಟೆ ಮಾಡ್ರನ್ ಉಡುಗೆಯನ್ನೂ ಧರಿಸುತ್ತಾರೆ. ಮಾಡ್ರನ್ ಡ್ರೆಸ್‌ಗಳಲ್ಲೂ ಸೂಪರ್ ಆಗಿ ಕಾಣಿಸುತ್ತಾರೆ. ಆಗಾಗ ಫೋಟೋಶೂಟ್ ಮಾಡಿಸುವ ಸ್ಪಂದನಾ ಎಲ್ಲಾ ಉಡುಗೆಯಲ್ಲೂ ಮುದ್ದಾಗಿ ಕಾಣಿಸುತ್ತಾರೆ.

Related Articles

Back to top button