ಜನಮನ
ಊಟ ಮಾಡುತ್ತಿದ್ದ ವೇಳೆ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿ ಎದೆಗೆ ಚೂರಿ ಎಸದ ಬಾಲಕ

Views: 0
ಮಧ್ಯಾಹ್ನ ಊಟ ಮಾಡುತ್ತಿದ್ದ ವೇಳೆ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿತ್ತು. ವಿದ್ಯಾರ್ಥಿಯೊಬ್ಬ ಮತ್ತೊಬ್ಬ ವಿದ್ಯಾರ್ಥಿಗೆ ಚೂರಿ ಎಸೆದ ಘಟನೆ ಮಂಗಳೂರು ಶಾಲೆಯೊಂದರಲ್ಲಿ ನಡೆಯಿತು.
ಮಧ್ಯಾಹ್ನದ ಊಟದ ಸಮಯದಲ್ಲಿ ವಿದ್ಯಾರ್ಥಿಯ ತಟ್ಟೆಯಿಂದ ಸಾಂಬಾರು ಚೆಲ್ಲಿದ್ದಕ್ಕೆ ಪ್ರತಿಯಾಗಿ ಬಟ್ಟೆ ಕಲೆಯಾಯಿತೆಂದು ಕೋಪಗೊಂಡು ಸಾಂಬಾರು ಚೆಲ್ಲಿದ ವಿದ್ಯಾರ್ಥಿಗೆ ಕಪಾಳಕ್ಕೆ ಹೊಡೆದು ಆತನ ನೋಟ್ ಪುಸ್ತಕವನ್ನು ಸಾಂಬಾರಿಗೆ ಎಸೆದಿದ್ದಾನೆ.
ಏಟು ತಿಂದ ವಿದ್ಯಾರ್ಥಿ ಕೋಪಗೊಂಡು ತನ್ನ ಬ್ಯಾಗ್ ನಲ್ಲಿ ಇದ್ದ ಚೂರಿ ತೆಗೆದು ಹಲ್ಲೆಗೈದ ವಿದ್ಯಾರ್ಥಿ ಮೇಲೆ ಎಸೆದಿದ್ದಾನೆ.
ಚೂರಿ ಎಸೆತದಿಂದ ವಿದ್ಯಾರ್ಥಿಯ ಎದೆ ಭಾಗದ ಪಕ್ಕಕ್ಕೆ ಚುಚ್ಚಿದ್ದು ಗಾಯಗೊಂಡ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದ್ದು ವಿದ್ಯಾರ್ಥಿ ಪ್ರಾಣಾಪಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ .
ಪ್ರಕರಣ ಮಕ್ಕಳ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.