ಶಿಕ್ಷಣ

ಗುರುಕುಲ ವಿದ್ಯಾ ಸಂಸ್ಥೆಯಲ್ಲಿ ‘ಕಲಾವೈಭೋಗಂ’ 21ನೇ ವಾರ್ಷಿಕೋತ್ಸವ ಸಮಾರಂಭ

Views: 90

ಕನ್ನಡ ಕರಾವಳಿ ಸುದ್ದಿ: ಬಾಂಡ್ಯ ಎಜ್ಯುಕೇಶನಲ್ ಟ್ರಸ್ಟ್ ಪ್ರವರ್ತಿತ ವಕ್ವಾಡಿ ಗುರುಕುಲ ವಿದ್ಯಾಸಂಸ್ಥೆಯಲ್ಲಿ ‘ಕಲಾ ವೈಭೋಗಂ’ 21ನೇ ವಾರ್ಷಿಕೋತ್ಸವ ಸಮಾರಂಭ ನ.28ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಡೈರೆಕ್ಟರ್ ಜನರಲ್ ಮತ್ತು ಪದ್ಮಶ್ರೀ ಸಮೂಹ ಸಂಸ್ಥೆ ಬೆಂಗಳೂರು,ಮಾಜಿ ಕುಲಪತಿ ಡಾ. ಜಯಪ್ರಕಾಶ್ ಶೆಟ್ಟಿ ಎಂ ಮಾತನಾಡಿ, ಶಿಕ್ಷಣ ಒಂದು ನಿರಂತರ ಪ್ರಕ್ರಿಯೆ ಅದು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಬದುಕಿನ ಜೀವನದ ಅನುಭವಗಳಿಂದ ಕಲಿಯುವುದನ್ನು ಒಳಗೊಂಡಿದೆ. ಒಳ್ಳೆಯ ಗುಣಗಳು, ಶಿಸ್ತು, ಆತ್ಮವಿಶ್ವಾಸ ಮತ್ತು ನೈತಿಕ ಮೌಲ್ಯಗಳನ್ನು ರೂಢಿಸಿ ಕೊಳ್ಳುವುದಾಗಿದೆ. ವಿದ್ಯಾರ್ಥಿಗಳು ಸಮಾಜದ ಜವಾಬ್ದಾರಿಯನ್ನು ಅರಿತು ಉತ್ತಮ ನಾಗರಿಕರನ್ನಾಗಿ ಬದುಕದನ್ನು ಮತ್ತು ಇತರರೊಂದಿಗೆ ಬೆರೆಯುವುದನ್ನು ಕಲಿಸಿಕೊಟ್ಟು ಜೊತೆಗೆ ಅತ್ಯುತ್ತಮ ಮೌಲ್ಯಗಳನ್ನು ರೂಡಿಸಿಕೊಂಡಾಗ ಅವರ ಸರ್ವಾಂಗೀಣ ವಿಕಾಸ ಸಾಧ್ಯ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ, ಬಾಂಡ್ಯ ಎಜ್ಯುಕೇಶನಲ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕಿ ಶ್ರೀಮತಿ ಅನುಪಮಾ ಎಸ್ ಶೆಟ್ಟಿ ಮಾತನಾಡಿ, ಭಾರತೀಯ ಪರಂಪರೆಯ ಆಧಾರದ ಶಿಕ್ಷಣವು ಮೌಲ್ಯಗಳು, ಚಾರಿತ್ರ್ಯ ನಿರ್ಮಾಣ, ಜ್ಞಾನಾರ್ಜನೆ ಮತ್ತು ಸ್ವಾವಲಂಬನೆಯನ್ನು ಗುರಿಯಾಗಿರಿಸಿಕೊಂಡು ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಶಿಸ್ತು ,ಸೇವೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿದಾಗ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಬಾಂಡ್ಯ ಎಜ್ಯುಕೇಶನಲ್ ಟ್ರಸ್ಟ್ ಕಾರ್ಯನಿರ್ವಾಹಕರಾದ ಕೆ. ಸುಭಾಶ್ಚಂದ್ರಚಂದ್ರ ಶೆಟ್ಟಿ, ಕಾಲೇಜು ವಿದ್ಯಾರ್ಥಿ ನಾಯಕರಾದ ಸುಶಾಂತ ಗೌಡ, ಶ್ರೇಯ ಗುರುಕುಲ ಪಬ್ಲಿಕ್ ಸ್ಕೂಲ್ ನ ಜಿ ಪ್ರಥಮ್ ಕುಮಾರ್,ಝೂರಾ.ಎಂ.ಇಮ್ರಾನ್, ಉಪಸ್ಥಿತರಿದ್ದರು.

ಗುರುಕುಲ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸಂದೀಪ್ ನಾಯಕ್, ಗುರುಕುಲ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲೆ ಡಾ. ರೂಪ ಶೆಣೈ ಶಾಲಾ ವಾರ್ಷಿಕ ವರದಿ ವಾಚಿಸಿದರು.

ವಿದ್ಯಾರ್ಥಿ ಶ್ರಾವ್ಯ ವಿ ಉಪಾಧ್ಯಾಯ ಸ್ವಾಗತಿಸಿದರು. ಝೂರಾ.ಎಂ.ಇಮ್ರಾನ್ ಅಪ್ಪಣ್ಣ ಹೆಗಡೆಯವರ ಬಗ್ಗೆ ಮಾತನಾಡಿದರು. ಕೀರ್ತನಾ ಪಿ ಅತಿಥಿಗಳನ್ನು ಪರಿಚಯಿಸಿದರು. ಜಿ ಪ್ರಥಮ್ ಕುಮಾರ್, ಪ್ರಣಮ್ಯ ವಿ ಆಚಾರ್ಯ, ಕಾರ್ಯಕ್ರಮ ನಿರೂಪಿಸಿದರು.ಋತ್ವ ಆರ್ ಶೆಟ್ಟಿ ವಂದಿಸಿದರು.

Related Articles

Back to top button
error: Content is protected !!