ವೃದ್ದಾಶ್ರಮದಲ್ಲಿ ಅರಳಿದ ಪ್ರೀತಿ 75ರ ಮತ್ತು 63ರ ಜೋಡಿಗೆ ಮದುವೆ
Views: 52
ಕನ್ನಡ ಕರಾವಳಿ ಸುದ್ದಿ: ತಮ್ಮವರಿಗೆ ಬೇಡವಾಗಿ ಹಿಮಾಚಲ ಪ್ರದೇಶದ ಬಿಲಾಸ್ಪುರ್ ಜಿಲ್ಲೆಯ ಫಾಗಾಸ್ನಲ್ಲಿರುವ ‘ಅಪ್ಪಾಘರ್’ ಎಂಬ ವೃದ್ಧಾಶ್ರಮದಲ್ಲಿ ಜೀವನ ದೂಡುತ್ತಿದ್ದ ಕನ್ನಯ್ಯ ಲಾಲ್ (75), ಸಬೀನಾ (63) ಪರಸ್ಪರ ಮದುವೆಯಾಗಿ ಇಳಿವಯಸ್ಸಿನಲ್ಲಿ ಜೋಡಿ ಕಂಡುಕೊಂಡಿದ್ದಾರೆ.
ಜಿಲ್ಲಾಧಿಕಾರಿ ಕಿರಣ್ ಭದಾನಾ, ವೃದ್ಧಾಶ್ರಮದ ಎಲ್ಲ ನಿವಾಸಿಗಳು ಸಿಬ್ಬಂದಿ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.
ಮಂಗಳವಾರ ಸಂಜೆಯೇ ಹೊಸ ವಧುವರರಿಗೆ ಹಳದಿ ಶಾಸ್ತ್ರ ಹಾಗೂ ಮರುದಿನ ಬೆಳಿಗ್ಗೆ ವಿವಾಹ ನೆರವೇರಿಸಲಾಗಿದೆ. ಈ ಸಂದರ್ಭದಲ್ಲಿ ಮಾತ ನಾಡಿದ ಜಿಲ್ಲಾಧಿಕಾರಿ ಕಿರಣ್ ಭದಾನಾ, ಈ ಮದುವೆಯು ದಿಕ್ಕಿಲ್ಲವರಿಗೆ ಹೊಸ ಜೀವನ ನಡೆಸಲು ಸಾಧ್ಯವಿದೆ ಎಂಬ ಸಂದೇಶವನ್ನು ರವಾನಿಸಿದೆ’ ಎಂದರು.
ಹಿಮಾಚಲದ ಮಂಡಿ ಜಿಲ್ಲೆಯ ಥುನಾಗ್ ಹಳ್ಳಿಯ ನಿವಾಸಿಯಾದ ಕನ್ನಯ್ಯ ಹಿಂದೆ ಆಸ್ತಿವಂತನಾಗಿದ್ದು, ಪತ್ನಿ ಸಾವಿನ ಬಳಿಕ ಸಹೋದರರಿಗೆ ತನ್ನ ಆಸ್ತಿಯನ್ನು ವರ್ಗಾಯಿಸಿದ್ದರು. ಆನಂತರ ಬೀದಿಪಾಲಾಗಿದ್ದ ಅವರು ಗುಹೆಯಲ್ಲಿ ವಾಸಿಸುತ್ತಿದ್ದರು. 2022ರಲ್ಲಿ ಅವರನ್ನು ವೃದ್ಧಾಶ್ರಮದ ಸಿಬಂದಿ ರಕ್ಷಿಸಿದ್ದರು. ಇನ್ನು ಸಬೀನಾ ಅವರು ಕೋಲ್ಕತಾ ಮೂಲದ ನಿರಾಶ್ರಿತೆ.






