ಇತರೆ

ಹಣಕಾಸಿನ ವಿಚಾರವಾಗಿ ವಾಹನ ಡಿಕ್ಕಿ ಹೊಡೆಸಿ ಬೈಕ್ ಸವಾರರಿಬ್ಬರ ಕೊಲೆ

Views: 55

ಕನ್ನಡ ಕರಾವಳಿ ಸುದ್ದಿ: ಪಿಕ್ಅಪ್ ವಾಹನ ಚಾಲಕ ಮತ್ತು ಸ್ಕೂಟರ್‌ನಲ್ಲಿ ಬಂದಿದ್ದ ತಂಡವೊಂದರ ನಡುವೆ ಹಣಕಾಸಿನ ವಿಚಾರದಲ್ಲಿ ನಡೆದ ಮಾತಿನ ಚಕಮಕಿ ಮತ್ತು ಸಣ್ಣ ಹೊಡೆದಾಟದ ಬಳಿಕ ಪಿಕ್ ಅಪ್ ಚಾಲಕ ತನ್ನ ವಾಹನವನ್ನು ಸ್ಕೂಟರ್‌ಗೆ ಹಿಂಬದಿಯಿಂದ ಢಿಕ್ಕಿ ಹೊಡೆಸಿ ಇಬ್ಬರನ್ನು ಕೊಲೆಗೈದ ಘಟನೆ ಬೋಳಿಯಾರ್ ಸಮೀಪದ ಪೆಟ್ರೋಲ್‌ ಪಂಪ್ ಬಳಿಸೋಮವಾರ ಸಂಜೆ ಸಂಭವಿಸಿದೆ.

ಆರೋಪಿ ಚಾಲಕ ಪರಾರಿಯಾಗಿದ್ದು, ಕೊಣಾಜೆ ಪೊಲೀಸರು ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

ಕಿನ್ಯ ಗ್ರಾಮದ ಉಕ್ಕುಡ ನಿವಾಸಿಗಳಾದ ಮಹಮ್ಮದ್ ಜುನೈದ್ (23) ಮತ್ತು ಮಹಮ್ಮದ್ ಅಫ್ರಾಝ್ (23) ಮೃತಪಟ್ಟವರು. ಜುನೈದ್ ಕಲ್ಲಾಪು ಗ್ಲೋಬಲ್ ಮಾರ್ಕೆಟ್‌ನಲ್ಲಿ ಹಣ್ಣಿನ ವ್ಯಾಪಾರದ ಅಂಗಡಿಯಲ್ಲಿ ಕೆಲಸಕ್ಕಿದ್ದರೆ, ಅಫ್ರಾಝ್ ಬೆಂಗಳೂರಿನಲ್ಲಿ ಬಟ್ಟೆಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಆರೋಪಿ ಹಫೀಝ್ (22) ಬೋಳಿಯಾರ್ ನಿವಾಸಿಯಾಗಿದ್ದು, ಪಿಕ್‌ಅಪ್ ವಾಹನದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ.

ಘಟನೆಯ ವಿವರ: ಬೋಳಿಯಾರ್ ಜಂಕ್ಷನ್‌ನಿಂದ ಮುಡಿಪು ಮಿತ್ತಕೋಡಿ ಕಡೆ ಸಂಚರಿಸುವ ಮುಖ್ಯ ರಸ್ತೆ ಪಾಣೆಲ ಕ್ರಾಸ್ ಬಳಿ ಇರುವ ಪೆಟ್ರೋಲ್ ಪಂಪ್ ಬಳಿ ಪಿಕ್ ಅಪ್ ವಾಹನ ಸ್ಕೂಟರ್‌ಗೆ ಢಿಕ್ಕಿ ಹೊಡೆದು ಸ್ಕೂಟರ್ ಸವಾರರಲ್ಲಿ ಒಬ್ಬನಾದ ಅಫ್ರಾಝ್ ಸ್ಥಳದಲ್ಲೇ ಮೃತಪಟ್ಟರೆ, ಜುನೈದ್ ಗಂಭೀರ ಗಾಯಗೊಂಡು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು. ಘಟನೆಯ ಸಂದರ್ಭದಲ್ಲಿ ಸ್ಕೂಟರ್‌ಗೆ ಢಿಕ್ಕಿ ಹೊಡೆದ ಬಳಿ ಪಿಕ್ ಅಪ್ ವಾಹನ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದ ಅಫ್ರಾಝ್ ಮೇಲೆ ಪಿಕ್ ಅಪ್ ವಾಹನ ಚಲಿಸಿತ್ತು. ಬಳಿಕ ರಸ್ತೆಯ ಅಪಘಾತ ನಡೆದ ತಕ್ಷಣವೇ ಪಿಕಪ್ ಚಾಲಕ ಡೋ‌ರ್ ತೆಗೆದು ಪರಾರಿಯಾಗಿದ್ದು, ಘಟನೆಯ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಹಣಕಾಸಿನ ವಿಚಾರ ಹಲ್ಲೆಗೆ ಪ್ರತೀಕಾರ

ಹಫೀಝ್ ಸ್ಥಳೀಯವಾಗಿ ಮಾದಕ ವ್ಯಸನಿಯಾಗಿದ್ದು, ಈತನ ಮೇಲೆ ಗಾಂಜಾ ಪ್ರಕರಣ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿತ್ತು. ಎರಡು ದಿನಗಳ ಹಿಂದೆ ಐದಾರು ಜನರ ತಂಡವು ಹಣದ ವಿಚಾರದಲ್ಲಿ ಈತನ ಮೇಲೆ ಹಲ್ಲೆ ನಡೆಸಿತ್ತು ಎನ್ನಲಾಗಿದೆ. ಈ ವಿಚಾರದ ಬಳಿಕ ತಂಡ ವಾಪಸ್ ತೆರಳಿತ್ತು. ಸೋಮವಾರವೂ ಸಂಜೆಯ ವೇಳೆಗೆ ಕೆಲವು ಜನರ ತಂಡ ಬೋಳಿಯಾ‌ರ್ರಂತಡ್ಕ ಕ್ರಾಸ್ ಬಳಿ ಬಂದು ಈತನೊಂದಿಗೆ ಮಾತಿನ ಚಕಮಕಿ ನಡೆಸಿದ್ದು, ಹೆಲೆಟ್‌ನಲ್ಲಿ ಹೊಡೆದು ತಂಡ ಮುಡಿಪು ಕಡೆ ಬೈಕ್‌ಗಳಲ್ಲಿ ತೆರಳಿತ್ತು. ಈ ತಂಡದಲ್ಲಿ ಕೆಲವರು ಬೈಕ್‌ನಲ್ಲಿ ಮುಂದೆ ಸಂಚರಿಸಿದರೆ, ಹಿಂದಿನಿಂದ ಸ್ಕೂಟರ್‌ನಲ್ಲಿ ಅಫ್ರಾಝ್ ಮತ್ತು ಜುನೈದ್ ಅವರು ಬೋಳಿಯಾರ್ ಜಂಕ್ಷನ್ ಕಳೆದು ಮುಡಿಪು ಕಡೆ ಸಂಚರಿಸುತ್ತಿದ್ದಾಗ ಪಾಣೆಲ ಕ್ರಾಸ್ ಬಳಿಯಿರುವ ಪೆಟ್ರೋಲ್ ಬಂಕ್ ತಲುಪುತ್ತಿದ್ದಂತೆ ಹಲ್ಲೆಗೀಡಾಗಿದ್ದ ಹಫೀಝ್ ಪಿಕ್ ಅಪ್ ವಾಹನದಲ್ಲಿ ಹಿಂಬದಿಯಿಂದ ಸ್ಕೂಟರ್‌ಗೆ ಢಿಕ್ಕಿ ಹೊಡೆದಿದ್ದು, ರಸ್ತೆಗೆ ಬಿದ್ದಿದ್ದ ಅಫ್ರಾಝ್ ಮೇಲೆ ವಾಹನವನ್ನು ಚಲಾಯಿಸಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.

Related Articles

Back to top button
error: Content is protected !!