ಶಿಕ್ಷಣ
ಒಂದೂವರೆ ವರ್ಷದ ಬಾಲಕಿಯ ಮೇಲೆ ಶಾಲಾ ವಾಹನ ಹರಿದು ಸ್ಥಳದಲ್ಲೇ ಸಾವು
Views: 24
ಕನ್ನಡ ಕರಾವಳಿ ಸುದ್ದಿ: ಒಂದೂವರೆ ವರ್ಷದ ಕಂದಮ್ಮನ ಮೇಲೆ ಶಾಲಾ ವಾಹನ ಹರಿದು ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಶಾಸ್ತ್ರಿ ಪಬ್ಲಿಕ್ ಸ್ಕೂಲ್‌ನ ಶಾಲಾ ವಾಹನ ಮಗುವಿಗೆ ಡಿಕ್ಕಿ ಹೊಡೆದಿದ್ದು, ಮಗುವಿನ ಮೇಲೆಯೇ ವಾಹನ ಹರಿದು ಹೋಗಿದೆ. ಶಾಲೆಯಿಂದ ಮನೆಗೆ ಬಂದಿದ್ದ 4 ವರ್ಷದ ಬಾಲಕನನ್ನು ತಾಯಿ ವಾಹನದಿಂದ ಇಳಿಸಿಕೊಂಡಿದ್ದರು. ಇದೇ ವೇಳೆ ಪಕ್ಕದಲ್ಲಿದ್ದ ಮಗು ಲತಿಕ್ಷಾಗೆ ಶಾಲಾ ವಾಹನ ಡಿಕ್ಕಿ ಹೊಡೆದಿದೆ. ವಾಹನದ ಚಕ್ರ ಬಾಲಕಿಯ ಮೇಲೆ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ವಾಹನ ಚಾಲಕ ಸಿದ್ದರಾಜು (42) ವಿರುದ್ಧ ದೂರು ದಾಖಲಾಗಿದೆ. ವೇಗ ಹಾಗೂ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






