ಶಿಕ್ಷಣ

ಅ.2ರಂದು ಕಾಳಾವರ ಪ್ರೌಢಶಾಲೆಯಲ್ಲಿ ಕುಮಾರಿ ಮುಗ್ಧ ಯು.ಶೆಟ್ಟಿ ಸ್ಮರಣಾರ್ಥ ಆವರಣ ಗೋಡೆ ಉದ್ಘಾಟನೆ

Views: 121

ಕನ್ನಡ ಕರಾವಳಿ ಸುದ್ದಿ: ಕಾಳಾವರ ನೇತಾಜಿ ಸುಭಾಶ್ ಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆ ಶಾಲಾ ಆವರಣದಲ್ಲಿ ಕುಮಾರಿ ಮುಗ್ಧ ಯು.ಶೆಟ್ಟಿ ಸ್ಮರಣಾರ್ಥ ಅವರ ತಂದೆ ಉದಯ ಕುಮಾರ್ ಶೆಟ್ಟಿ, ಅನಗಳ್ಳಿ ಮನೆ ಸಲ್ವಾಡಿ ಇವರು ಕೂಡ ಮಾಡಿದ 10 ಲಕ್ಷ ವೆಚ್ಚದಲ್ಲಿ ಶಾಲಾ ಆವರಣ ಗೋಡೆಯನ್ನು ಅಕ್ಟೋಬರ್ 2 ರಂದು ಪೂರ್ವಾಹ್ನ 9:30ಕ್ಕೆ ಕುಂದಾಪುರದ ಮಾನ್ಯ ಶಾಸಕರಾದ ಶ್ರೀ ಕಿರಣ್ ಕುಮಾ‌ರ್ ಕೊಡ್ಗಿ ಉದ್ಘಾಟಿಸಲಿದ್ದಾರೆ.

ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶ್ರೀ ರಾಘವೇಂದ್ರ ಅವರು ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಎಚ್. ಶೋಭಾ ಶೆಟ್ಟಿ, ವಿಜಯ್ ಕುಮಾರ್ ಶೆಟ್ಟಿ ಕುಂದಾಪುರ ಅನಗಳ್ಳಿ ಮನೆ ಸಲ್ವಾಡಿ, ಡಾ. ಭಾಸ್ಕ‌ರ್ ಶೆಟ್ಟಿ ಸಲ್ವಾಡಿ, ಪ್ರಾಂಶುಪಾಲರು ಕಾರ್ಯಕ್ರಮದಲ್ಲಿ ಉಪಸ್ಥಿತಲಿರಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಶಾಲಾ ಮುಖ್ಯೋಪಾಧ್ಯಾಯರಾದ ಮುಸರತ್ ಜಹಾನ್ ಅಕ್ಟರ್ ಎಂ,ಅಧ್ಯಾಪಕ ವೃಂದ, ವಿದ್ಯಾರ್ಥಿ ಪೋಷಕರು ಹಾಗೂ ವಿದ್ಯಾರ್ಥಿಗಳು ಆದರದ ಸ್ವಾಗತ ಕೋರಿದ್ದಾರೆ.

Related Articles

Back to top button
error: Content is protected !!