ಬ್ರಹ್ಮಾವರ ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್: ಓಣಂ ಆಚರಣೆ
Views: 118
ಕನ್ನಡ ಕರಾವಳಿ ಸುದ್ದಿ: ಫಾರ್ಚೂನ್ ಅಕಾಡೆಮಿಕ್ ಮತ್ತು ಚಾರಿಟೇಬಲ್ ಟ್ರಸ್ಟ್ ಪ್ರವರ್ತಿತ ಬ್ರಹ್ಮಾವರ ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ಇವರ ನೇತೃತ್ವದಲ್ಲಿ ಅಗಸ್ಟ್ 14ರಂದು ಕಾಲೇಜಿನ ಅಡಿಟೋರಿಯಂನಲ್ಲಿ ಓಣಂ ಆಚರಣೆಯನ್ನು ವಿಶಿಷ್ಟವಾಗಿ ಸಂಭ್ರಮದ ಆಚರಣೆ ನಡೆಯಿತು.
ಓಣಂ ಆಚರಣೆಯ ಅಂಗವಾಗಿ ಚಂಡೆ ವಾದನ, ಮೊಸರು ಕುಡಿಕೆ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಹಗ್ಗ ಜಗ್ಗಾಟ, ಸಾಂಪ್ರದಾಯಿಕ ಗೇಮ್ಸ್, ಮತ್ತು ಡಾನ್ಸ್, ಫ್ಯಾಶನ್ ಶೋ, ಸಾಮೂಹಿಕ ಸವಿಯೂಟ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಅಪರಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಫಾರ್ಚೂನ್ ಅಕಾಡೆಮಿಕ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಡಾ.ತಾರನಾಥ ಶೆಟ್ಟಿ ಬಹುಮಾನ ವಿತರಿಸಿ ಮಾತನಾಡಿದ ಅವರು, ಎಲ್ಲಾ ವಿದ್ಯಾರ್ಥಿಗಳು ಜಾತಿ ಮತ ಪಂಥ ಇಲ್ಲದೆ ಆಚರಿಸುವ ಹಬ್ಬವಾಗಿದೆ.ಈ ಮೂಲಕ ಸಮಾನತೆ, ಸಾಮರಸ್ಯ ಮತ್ತು ಒಗ್ಗಟ್ಟಿನ ಸಂಕೇತವಾಗಿ ಆಚರಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.
ಈ ವೇಳೆ ವಿದ್ಯಾರ್ಥಿಗಳು ಶ್ವೇತ ವರ್ಣದ ಬಟ್ಟೆಗಳನ್ನು ಧರಿಸಿ ಭಾಗವಹಿಸಿ ಎಲ್ಲರೂ ಒಟ್ಟಾಗಿ ಸಾಂಪ್ರದಾಯಿಕ ಸಸ್ಯಾಹಾರಿ ಊಟವನ್ನು ಸವಿಯಲಾಯಿತು.
ವೇದಿಕೆಯಲ್ಲಿ ಟ್ರಸ್ಟಿ ಸುಜಾತ ಟಿ.ಶೆಟ್ಟಿ, ಫಾರ್ಚುನ್ ಹೆಲ್ತ್ ಸೈನ್ಸಸ್ ಪ್ರಾಂಶುಪಾಲೆ ಸ್ಮಿತಾ ಮೋಲ್ ಇಎಂ ಬೋಧಕ- ಬೋಧಕೇತರ ಸಿಬ್ಬಂದಿಗಳು ಇನ್ನಿತರ ಗಣ್ಯರು ಉಪಸ್ಥಿತರಿದ್ದರು.


















