ವಕ್ವಾಡಿ ಸರಕಾರಿ ಪ್ರೌಢಶಾಲೆಯಲ್ಲಿ ಸಂಭ್ರಮದ ’80ನೇ ಸ್ವಾತಂತ್ರ್ಯೋತ್ಸವ’ದ ಆಚರಣೆ
Views: 53
ಕನ್ನಡ ಕರಾವಳಿ ಸುದ್ದಿ: ಸರಕಾರಿ ಪ್ರೌಢಶಾಲೆ ವಕ್ವಾಡಿಯಲ್ಲಿ ಬಹು ಅರ್ಥಪೂರ್ಣವಾಗಿ ಸಂಭ್ರಮ ಮತ್ತು ಸಡಗರದಿಂದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ಶಾಲಾ ದೈಹಿಕ ಶಿಕ್ಷಕರಾದ ಶ್ರೀ ಕುಸುಮಾಕರ ಶೆಟ್ಟಿ ಇವರು ಕಾರ್ಯಕ್ರಮಕ್ಕೆ ಅಗಮಿಸಿದ ಎಲ್ಲರನ್ನು ಸ್ವಾಗತಿಸಿಿ, ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ತಿಳಿಸಿದರು.ಅವರು ಹಿರಿಯರ ತ್ಯಾಗ ಬಲಿದಾನದಿಂದ ಸಂಪಾದಿತ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಕಾರ್ಯ ನಿಮ್ಮಿಂದ ಆಗಬೇಕು ಎಂದು ಕರೆಯಿತ್ತರು. ಕಾರ್ಯಕ್ರಮದ ಅಧ್ಯಕ್ಷರು ಶ್ರೀ ರಾಜು ಕುಲಾಲ SDMC ಅಧ್ಯಕ್ಷರು ಇವರು ಧ್ವಜಾರೋಹಣಗೈದು “ಪ್ರತಿಯೊಬ್ಬ ವಿದ್ಯಾರ್ಥಿಗಳು ಭಾರತಾಂಬೆಯ ಅತ್ಯಮೂಲ್ಯ ಆಸ್ತಿ” ಎಲ್ಲರೂ ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದರು. ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕ -ಶಿಕ್ಷಕೇತರವೃಂದದವರಿಂದ’ ಜಲ ಸಂರಕ್ಷಣೆ ‘ಪ್ರತಿಜ್ಞೆ ಕೈಗೊಳ್ಳಲಾಯಿತು.ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಗಿತ್ತು. ಪ್ರಾಯೋಜಕರು ಯುವಶಕ್ತಿ ಮಿತ್ತ ಮಂಡಳಿ ವಕ್ವಾಡಿ ಮತ್ತು ಗ್ರಾಮ ಪಂಚಾಯತ್ ಕಾಳಾವರ .ಅದರ ಬಹುಮಾನವನ್ನು SDMC ಸದಸ್ಯರು, ಯುವಶಕ್ತಿ ಮಿತ್ರ ಮಂಡಳಿ ವಕ್ವಾಡಿ ಇದರ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಗ್ರಾಮ ಪಂಚಾಯತ್ ಕಾಳಾವರ ಮಾಜಿ ಸದಸ್ಯ ಹಾಗೂ ಕೆಡಿಪಿ ಸದಸ್ಯರಾದ ಶ್ರೀ ರಮೇಶ್ ಶೆಟ್ಟಿ ಇವರು ವಿವಿಧ ಸ್ಪರ್ಧೆಗಳ ಬಹುಮಾನವನ್ನು ವಿತರಿಸಿದರು.
ಸಹಶಿಕ್ಶಕಿ ಶ್ರೀಮತಿ ಶೈಲಾ ನಾಯಕ್ ಇವರು ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಭಾರತಿ ಎನ್. ಶಿಕ್ಷಕ-ವೃಂದದವರು ಮತ್ತು ವಿದ್ಯಾರ್ಥಿಗಳ ಪಾಲಕರು, ದಾನಿಗಳು, ದೇಶಾಭಿಮಾನಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮದ ಕೊನೆಯಲ್ಲಿ ಧನ್ಯವಾದಗಳೊಂದಿಗೆ ಸಿಹಿತಿಂಡಿ ನೀಡಿದವರ ಸ್ಮರಿಸಿ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಲಾಯಿತು.









