ಶಿಕ್ಷಣ

ಕೋಟೇಶ್ವರ ಪದವಿ ಕಾಲೇಜು ಗ್ರಂಥಪಾಲಕ ರವಿಚಂದ್ರರಿಗೆ ಬೀಳ್ಕೊಡುಗೆ

Views: 23

ಕನ್ನಡ ಕರಾವಳಿ ಸುದ್ದಿ:  ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಇಲ್ಲಿ ಕಳೆದ ಹದಿನೈದು ವರ್ಷಗಳಿಂದ ಗ್ರಂಥಪಾಲಕರಾಗಿ ಸಮಯಪಾಲನೆ ಹಾಗೂ ಶಿಸ್ತಿನಿಂದ ಸೇವೆಗೈದು ವಯೋನಿವೃತ್ತರಾದ ರವಿಚಂದ್ರ ಹೆಚ್.ಎಸ್.ರವರಿಗೆ ಕಾಲೇಜಿನ ವತಿಯಿಂದ ಬೀಳ್ಕೊಡುಗೆ ಸಮಾರಂಭ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ಧ ಕಾಲೇಜಿನ ಪ್ರಾಂಶುಪಾಲ ನಾಗರಾಜ ವೈದ್ಯ ಎಂ. ಅವರ ಪ್ರಾಮಾಣಿಕ ಸೇವೆಯನ್ನು ಸ್ಮರಿಸಿದರು. ಹಿಂದೆ ಇದೇ ಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿದ್ದ ಡಾ.ರಾಜೇಂದ್ರ ಎಸ್. ನಾಯಕ, ಪ್ರೊ. ರಾಮರಾಯ ಆಚಾರ್ಯ, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು.

ಸಿಂಚನಾ ಮತ್ತು ತಂಡದವರು ಪ್ರಾರ್ಥಿಸಿದರು. ಶೃತಿ ಆಚಾರ್ಯ ಎನ್. ಕಾರ್ಯಕ್ರಮ ನಿರೂಪಿಸಿದರು. ನಿರಂಜನ ಶರ್ಮ ಗ್ರಂಥಪಾಲಕರ ಸೇವೆಯನ್ನು ಸಭೆಗೆ ಪರಿಚಯಿಸಿದರು. ಅಧ್ಯಾಪಕ ಕಾರ್ಯದರ್ಶಿ ಡಾ. ಉದಯ ಶೆಟ್ಟಿ ಕೆ. ಸಂಘಟಿಸಿದ ಈ ಸಮಾರಂಭದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸುಬ್ರಹ್ಮಣ್ಯ ಎ. ಸ್ವಾಗತಿಸಿದರು.ಡಾ. ಭಾಗೀರಥಿ ನಾಯ್ಕ ವಂದಿಸಿದರು.

Related Articles

Back to top button
error: Content is protected !!