ಜನಮನ

ಆಗುಂಬೆ ಘಾಟ್‌ನಲ್ಲಿ ಸೆ.30ರ ವರೆಗೆ ಘನ ವಾಹನ ಸಂಚಾರ ನಿಷೇಧ.. ಬದಲಿ ಮಾರ್ಗ ಯಾವುದು?

Views: 31

ಕನ್ನಡ ಕರಾವಳಿ ಸುದ್ದಿ : ಭಾರೀ ಮಳೆ ಹಾಗೂ ಭಾರೀ ವಾಹನಗಳ ಸಂಚಾರದಿಂದಾಗಿ ಆಗುಂಬೆ ಘಾಟಿಯ ರಸ್ತೆ ಬದಿಯಲ್ಲಿ ಅಲ್ಲಲ್ಲಿ ಭೂ ಕುಸಿತವಾಗುವ ಸಂಭವವಿದೆ. ಹಾಗಾಗಿ ಸೆ.30 ರ ವರೆಗೆ ಈ ಘಾಟಿಯ ಮೂಲಕ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶವಿದ್ದು, ಘನ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ ಆದೇಶಿಸಿದ್ದಾರೆ.

ಬದಲಿ ಮಾರ್ಗ ಹೀಗಿದೆ

ತೀರ್ಥಹಳ್ಳಿಯಿಂದ ಉಡುಪಿ ಕಡೆಗೆ ಸಾಗಲಿರುವ ಘನ ವಾಹನಗಳು ತೀರ್ಥಹಳ್ಳಿ – ನಗರ – ಕುಂದಾಪುರ ಹಾಗೂ ಉಡುಪಿ ಮಾರ್ಗವಾಗಿ ಸಂಚರಿಸಬೇಕು.

ಚಿಕ್ಕಮಗಳೂರಿನಿಂದ ಉಡುಪಿ ಕಡೆಗೆ ಬರುವ ಭಾರಿ ವಾಹನಗಳು ಬಾಳೆಹೊನ್ನೂರು – ಮಾಗುಂಡಿ – ಕಳಸ – ಕುದುರೆಮುಖ – ಎಸ್.ಕೆ.ಬಾರ್ಡರ್ ಮಾರ್ಗವಾಗಿ ಸಂಚರಿಸಬೇಕು.

ನರಸಿಂಹರಾಜಪುರದಿಂದ ಉಡುಪಿ ಕಡೆಗೆ ಸಾಗುವ ವಾಹನಗಳು ಕೊಪ್ಪ – ಜಯಪುರ – ಬಾಳೆಹೊಳೆ-ಕಳಸ – ಕುದುರೆಮುಖ – ಎಸ್.ಕೆ ಬಾರ್ಡರ್ ಮಾರ್ಗವಾಗಿ ಸಂಚರಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Related Articles

Back to top button
error: Content is protected !!