ಪತ್ನಿಯ ನಡವಳಿಕೆ ಮೇಲೆ ಅನುಮಾನ ವ್ಯಕ್ತಪಡಿಸಿದ ಪತಿ, ಕಿರುಕುಳ ತಾಳಲಾರದೇ ಪತಿ ಆತ್ಮಹತ್ಯೆ
Views: 92
ಕನ್ನಡ ಕರಾವಳಿ ಸುದ್ದಿ: ಪತ್ನಿಯ ಕಿರುಕುಳ ತಾಳಲಾರದೇ ಪತಿ ನೇಣು ಬಿಗಿದುಕೊಂಡು ಜೀವ ಬಿಟ್ಟಿರುವ ಘಟನೆ ಹುಬ್ಬಳ್ಳಿಯ ಬೆಂಗೇರಿಯ ಕಾಲೋನಿಯಲ್ಲಿ ನಡೆದಿದೆ.
ಸಂತೋಷ್ ಅಳ್ಳೂರು (39) ಮೃತ ದುರ್ದೈವಿ.
ಸುಮಾರು 18 ವರ್ಷಗಳ ಸಂತೋಷ್, ಲಲಿತಾ ಪ್ರೀತಿಸಿ ಮದುವೆ ಆಗಿದ್ದ. ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾದ ಇವರ ಸಂಸರಾಕ್ಕೆ ಮುದ್ದಾದ ಮೂವರು ಮಕ್ಕಳು ಜನಿಸಿದ್ದವು. ಆರಂಭದಲ್ಲಿ ಇವರ ತುಂಬು ಸಂಸಾರ ಚೆನ್ನಾಗಿಯೇ ಇತ್ತು..
ಮದುವೆಯಾದ ಬೆನ್ನಲ್ಲೇ ಪತ್ನಿಗೆ ಅಂಗನವಾಡಿಯಲ್ಲಿ ಕೆಲಸ ಕೂಡ ಕೊಡಿಸಿದ್ದನಂತೆ. ಅಂಗನವಾಡಿಯಲ್ಲಿ ಕೆಲಸ ಸಿಕ್ಕ ನಂತರ, ಈಕೆಯ ನಡವಳಿಕೆಯಲ್ಲಿ ಬದಲಾಗಿದೆ ಅನ್ನೋದು ಸಂತೋಷ್ ಆರೋಪವಾಗಿತ್ತು. ಪತ್ನಿಯ ನಡವಳಿಕೆ ಮೇಲೆ ಅನುಮಾನ ವ್ಯಕ್ತಪಡಿಸಿ ಸಂತೋಷ್ ಪ್ರಶ್ನೆ ಮಾಡಿದ್ದ. ಅಷ್ಟಕ್ಕೆ ಪತಿ ವಿರುದ್ಧ ಸಿಡಿದೆದ್ದ ಪತ್ನಿ ಲಲಿತಾ, ಮಹಿಳಾ ಠಾಣೆಯಲ್ಲಿ ಗಂಡನ ವಿರುದ್ಧ ದೂರು ದಾಖಲಿಸಿದ್ದಳು. ಮಾತ್ರವಲ್ಲ, ತನ್ನ ಮಗಳಿಂದಲೂ ಅಪ್ಪ ಕುಡಿದು ಬಂದು ಅಮ್ಮನಿಗೆ ಕಿರುಕುಳ ನೀಡುತ್ತಾನೆ ಎಂದು ದೂರು ದಾಖಲಿಸಿದ್ದಳು ಎನ್ನಲಾಗಿದೆ.
ದೂರಿನ ಬೆನ್ನಲ್ಲೇ ಪೊಲೀಸರು ಠಾಣೆಗೆ ಕರೆಸಿ ವಿಚಾರಿಸಿದ್ದಾರೆ. ವಿಚಾರಣೆ ನೆಪದಲ್ಲಿ ಪೊಲೀಸರು ಆಗಾಗ ಆತನ ಕರೆಸಿ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೂಡ ಇದೆ. ಈ ಎಲ್ಲ ಬೆಳವಣಿಗೆ ನಂತರ ಹಿರಿಯರು ಬುದ್ದ ಹೇಳಿದ್ದರು ಎನ್ನಲಾಗಿದೆ. ಆದರೆ ಪತಿ ವಿರುದ್ಧ ಸಂಸಾರ ಮಾಡಲು ಒಪ್ಪದ ಲಲಿತಾ ಇತ್ತೀಚೆಗೆ ಡಿವೋರ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದಳು ಎನ್ನಲಾಗಿದೆ. ಇದೀಗ ಸಂತೋಷ್, ಪತ್ರ ಬರೆದಿಟ್ಟು ದುಡುಕಿನ ನಿರ್ಧಾರ ಕೈಗೊಂಡಿದ್ದಾನೆ. ಪತ್ರದಲ್ಲಿ ನನ್ನ ನಿರ್ಧಾರಕ್ಕೆ ಪತ್ನಿ ಲಲಿತಾನೇ ಕಾರಣ. ಆಕೆಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ನಮೂದಿಸಿದ್ದ. ಅಂತೆಯೇ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ.






