ಇತರೆ
ಆಟವಾಡುತ್ತಿದ್ದ ವೇಳೆ ಹಗ್ಗಕ್ಕೆ ಸಿಲುಕಿ ಬಾಲಕಿ ಸಾವು
Views: 45
ಕನ್ನಡ ಕರಾವಳಿ ಸುದ್ದಿ: ಬೇಸಿಗೆ ರಜೆಗೆ ಅಜ್ಜಿಯ ಮನೆಗೆ ಬಂದಿದ್ದ ಬಾಲಕಿಯೊಬ್ಬಳು ಆಟವಾಡುತ್ತಿದ್ದ ವೇಳೆ ಹಗ್ಗಕ್ಕೆ ಸಿಲುಕಿ ಮೃತಪಟ್ಟ ಘಟನೆ ಶೃಂಗೇರಿ ತಾಲೂಕಿನ ಬೆಟ್ಟಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲೊಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಸಪ್ತಮಿ (14) ಎಂದು ಗುರುತಿಸಲಾಗಿದೆ.
ಸಪ್ತಮಿ ತನ್ನ ತಾಯಿ ಶುಭಾ ಅವರೊಂದಿಗೆ ಬೇಸಿಗೆ ರಜೆಗೆಂದು ಅಜ್ಜಿಯ ಮನೆಗೆ ಬಂದಿದ್ದಳು.ಮಧ್ಯಾಹ್ನ ಊಟದ ನಂತರ ಮನೆಯವರು ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಬಾಲಕಿ ಏಣಿಯಿಂದ ಇಳಿಯಲು ಕಟ್ಟಿದ್ದ ಹಗ್ಗದಲ್ಲಿ ಆಟವಾಡುತ್ತಿದ್ದಳು. ಈ ಸಂದರ್ಭದಲ್ಲಿ ಕಾಲು ತಪ್ಪಿ ಬಿದ್ದ ಪರಿಣಾಮ ಹಗ್ಗವು ಕುತ್ತಿಗೆಯನ್ನು ಬಿಗಿದಿದ್ದು, ಉಸಿರುಗಟ್ಟಿ ಬಾಲಕಿ ಮೃತಪಟ್ಟಿದ್ದಾಳೆ. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






