ಜನಮನ

ನಕಲಿ ದಾಖಲೆ ಸೃಷ್ಟಿಸಿ ಭಾರತೀಯ ಎಂದು ಗುರುತಿಸಿಕೊಂಡಿದ್ದ ಅವನಲ್ಲ, ಅವಳು! ಅವಳಲ್ಲ, ಅವನು.. ಬಾಂಗ್ಲಾ ಪ್ರಜೆ ಅರೆಸ್ಟ್..!

Views: 151

ಕನ್ನಡ ಕರಾವಳಿ ಸುದ್ದಿ: ಕಳೆದ 30 ವರ್ಷಗಳಿಂದ ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಬಾಂಗ್ಲಾದೇಶಿ ಪ್ರಜೆಯನ್ನು ಬಂಧಿಸಲಾಗಿದೆ. ಆಘಾತಕಾರಿ ಸಂಗತಿ ಏನೆಂದರೆ ಕಳೆದ 8 ವರ್ಷಗಳಿಂದ ನೇಹಾ ಕಿನ್ನರ್  ಎಂಬ ಹೆಸರಿನಲ್ಲಿ ಟ್ರಾನ್ಸ್ಸೆಂಡರ್ ಆಗಿ ಆಕೆ ವಾಸವಿರೋದು ತಿಳಿದುಬಂದಿದೆ.

ಭೋಪಲ್ ಪೊಲೀಸರಿಗೆ ಸಿಕ್ಕ ರಹಸ್ಯ ಮಾಹಿತಿ ಮತ್ತು ಗುಪ್ತಚರ ಕಾರ್ಯಾಚರಣೆಯ ಆಧಾರದ ಮೇಲೆ ಬಾಂಗ್ಲಾದೇಶದ ಪ್ರಜೆಯನ್ನು ಬಂಧಿಸಿದ್ದಾರೆ. ಪೊಲೀಸ್ ತನಿಖೆಯಲ್ಲಿ ಆತ ತಾನು ಭಾರತೀಯ ಪ್ರಜೆ ಎಂದು ಸಾಬೀತುಪಡಿಸಲು ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ ಮತ್ತು ಪಾಸ್ಪೋರ್ಟ್ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ

ಬಂಧಿತ ಆರೋಪಿ ಹೆಸರು ಅಬ್ದುಲ್ ಕಲಾಂ  ಎಂದು ಗುರುತಿಸಲಾಗಿದೆ. ಈತ 10 ವರ್ಷ ಇರುವಾಗ ಭಾರತಕ್ಕೆ ಅಕ್ರಮವಾಗಿ ಬಂದಿದ್ದಾನೆ. ಎರಡು ದಶಕಗಳ ಕಾಲ ಮುಂಬೈನಲ್ಲಿ ವಾಸಿಸಿದ ನಂತರ ಭೋಪಾಲ್ನ ಬುಧ್ವಾರಾ ಪ್ರದೇಶದಲ್ಲಿ ವಾಸಿಸಲು ಪ್ರಾರಂಭಿಸಿದರು. ಅಲ್ಲಿ ಆತನ ನೇಹಾ ಕಿನ್ನರ್ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿದ್ದ.

IB ಮತ್ತ ATS ನಿಂದಲೂ ತನಿಖೆ ಪ್ರಕರಣದ ಗಂಭೀರತೆ ಪರಿಗಣಿಸಿರುವ ಅಧಿಕಾರಿಗಳು ಗುಪ್ತಚರ ಇಲಾಖೆ, ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ತನಿಖೆಯನ್ನು ನಡೆಸ್ತಿದೆ. ಆರೋಪಿಯ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಸೈಬರ್ ತಜ್ಞರು ಕೂಡ ತನಿಖೆ ಆರಂಭಿಸಿದ್ದು, ಎಲ್ಲಾ ಆಯಾಮದಲ್ಲೂ ವಿಷಯ ಕೆದಕುತ್ತಿದ್ದಾರೆ.

ಲಿಂಗ ದೃಢೀಕರಣ ಪರೀಕ್ಷೆ: ಆರೋಪಿ ನಿಜವಾಗಿಯೂ ಟ್ರಾನ್ಸ್ಜೆಂಡರ್ ಆಗಿದ್ದಾನೋ ಅಥವಾ ನಕಲಿ ಗುರುತು ಮರೆ ಮಾಡಲು ಈ ಫಾರ್ಮ್ ಅಳವಡಿಸಿಕೊಂಡಿದ್ದಾನೋ ಅನ್ನುವುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದಕ್ಕಾಗಿ ಆತನ ಲಿಂಗ ಪರಿಶೀಲನಾ ಪರೀಕ್ಷೆಯನ್ನೂ ಮಾಡಲಿದ್ದಾರೆ. ಹೆಚ್ಚಿನ ತನಿಖೆಗಾಗಿ 30 ದಿನಗಳ ಕಸ್ಟಡಿಗೆ ನೀಡಲಾಗಿದೆ. ನಂತರ ಗಡಿಪಾರಿಗೆ ಕಾನೂನು ಪ್ರಕ್ರಿಯೆಗಳು ಆರಂಭವಾಗಲಿವೆ. ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿರುವುದರಿಂದ ಕೇಂದ್ರ ಸರ್ಕಾರಕ್ಕೂ ಮಾಹಿತಿ ನೀಡಲಾಗಿದೆ.

Related Articles

Back to top button