ಇತರೆ

ಕಾಶ್ಮೀರಕ್ಕೆ ಹೋಗಿದ್ದಾಗ ಹೆಂಡತಿ, ಮಕ್ಕಳ ಎದುರೇ ಮಧುಸೂದನ್ ತಲೆಗೆ ಗುಂಡಿಟ್ಟು ಭಯಾನಕ ಹತ್ಯೆ ಮಾಡಿದ ಉಗ್ರರು!

Views: 94

ಕನ್ನಡ ಕರಾವಳಿ ಸುದ್ದಿ: ಜಮ್ಮು-ಕಾಶ್ಮೀರದ ಅನಂತಪುರ ಜಿಲ್ಲೆಯ ಪಹಲ್ಗಾಮ್ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಮೃತರಾದ ಮಧುಸೂದನ್ ರಾವ್ ಕೊನೆ ಕ್ಷಣ ಭಯಾನಕವಾಗಿದೆ.

ಮೂಲತಃ ಆಂಧ್ರದವರಾಗಿದ್ದ ಮಧುಸೂದನ್ ರಾವ್ ಅವರು, ಬೆಂಗಳೂರಿನಲ್ಲಿ ರಿಚಸ್ ಗಾರ್ಡನ್ನಲ್ಲಿ ವಾಸಿಸುತ್ತಿದ್ದರು. ಕಳೆದ 3 ದಿನಗಳ ಹಿಂದೆಷ್ಟೇ ಮಧುಸೂದನ್ ಕುಟುಂಬ ಪ್ರವಾಸಕ್ಕೆ ತೆರಳಿತ್ತು.

ಮಧುಸೂದನ್ ರಾವ್ ಕಾಶ್ಮೀರಕ್ಕೆ ಪ್ರೆಂಡ್ಸ್ ಹಾಗೂ ಫ್ಯಾಮಿಲಿ ಜೊತೆ ಟ್ರಿಪ್ ಹೋಗಿದ್ದರು. ಈ ವೇಳೆ ನಕಲಿ ಸೇನಾ ಯುನಿಫಾರಂ ಧರಿಸಿದ್ದ ಉಗ್ರರು ಎಂಟ್ರಿಯಾಗಿದ್ದಾರೆ. ಬರ್ತಿದ್ದಂತೆಯೇ, ಮಧುಸೂದನ್ ಬಳಿ ಪ್ರಶ್ನೆ ಮಾಡಿದ್ದಾರೆ. ಹಿಂದೂನಾ? ಮುಸ್ಲಿಂನಾ? ಗಾಬರಿಗೊಂಡ ಮಧುಸೂದನ್, ನಾನು ಮುಸ್ಲಿಂ ಎಂದಿದ್ದಾರೆ. ಆಗ ಉಗ್ರನೊಬ್ಬ ಜೇಬಿನಿಂದ ಕುರಾನ್ ತೆಗೆದು ಓದುವಂತೆ ಹೇಳಿದ್ದಾನೆ.

ಅದಕ್ಕೆ ಮಧುಸೂದನ್ ನಾನು ಮರೆತು ಹೋಗಿದ್ದೇನೆ ಎಂದು ಸಮಜಾಯಿಸಿದ್ದಾರೆ. ಆಗ ಪ್ಯಾಂಟ್ ಬಿಚ್ಚು ಎಂದು ಉಗ್ರ ತಾಕೀತು ಮಾಡಿದ್ದಾನೆ. ಪ್ಯಾಂಟ್ ಬಿಚ್ಚುತ್ತಿದ್ದಂತೆಯೇ ಹೆಂಡತಿ, ಮಕ್ಕಳ ಎದುರೇ ತಲೆಗೆ ಗುಂಡಿಟ್ಟಿದ್ದಾರೆ. ಮಧುಸೂದನ್ ಮುಸ್ಲಿಂ ಅಲ್ಲ ಹಿಂದೂ ಎಂದು ತಿಳಿದುಕೊಂಡೇ ಅಟ್ಯಾಕ್ ಮಾಡಿದ್ದಾರೆ ಎಂದು ಜೊತೆಗಿದ್ದ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

Related Articles

Back to top button