ಶಿಕ್ಷಣ
ಬಸ್ರೂರು ಶ್ರೀ ಶಾರದ ಪೂರ್ವ ಪ್ರಾಥಮಿಕ ಆಂಗ್ಲ ಮಾಧ್ಯಮ ಪುಟಾಣಿಗಳಿಗೆ “ಫ್ರೂಟ್ ಡೇ” ಕಾರ್ಯಕ್ರಮ
Views: 173
ಕುಂದಾಪುರ: ಬಸ್ರೂರು ಶ್ರೀ ಶಾರದ ಆಂಗ್ಲ ಮಾಧ್ಯಮ ಶಾಲೆಯಲ್ಲಿನ ಪೂರ್ವ ಪ್ರಾಥಮಿಕ ಮಕ್ಕಳಿಗೆ ಹಣ್ಣಿನ ಮಹತ್ವವನ್ನು ತಿಳಿಸುವ ಸದುದ್ದೇಶದಿಂದ ” ಫ್ರೂಟ್ ಡೇ” ಕಾರ್ಯಕ್ರಮವನ್ನು ಪುಟಾಣಿಗಳಿಗೆ ಹಮ್ಮಿಕೊಳ್ಳಲಾಯಿತು.
ವಿನೂತನ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಹಣ್ಣಿನ ಪರಿಚಯದ ಜೊತೆಗೆ ಅದರ ಮಹತ್ವವನ್ನು ತಿಳಿಸಲಾಯಿತು. ಪುಟಾಣಿಗಳು ವಿವಿಧ ಹಣ್ಣುಗಳ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ಶ್ರೀಯುತ ಸಂತೋಷ್ ಶೆಟ್ಟಿ, ಪ್ರಾಂಶುಪಾಲರಾದ ಶ್ರೀಮತಿ ಮಮತಾ ಪೂಜಾರಿ, ಶೈಕ್ಷಣಿಕ ನಿರ್ದೇಶಕರಾದ ಶ್ರೀಯುತ ಪ್ರಕಾಶ್ ಶೆಟ್ಟಿ ಹಾಗೂ ಆಡಳಿತ ಅಧಿಕಾರಿ ಶ್ರೀಮತಿ ಆಶಾ ಶೆಟ್ಟಿ ಯವರು ಪಾಲ್ಗೊಂಡಿದ್ದರು.