ಇತರೆ

ದುರಂತ ಸಾವಿಗೀಡಾದ ಕುಟುಂಬದ ಸಾಮೂಹಿಕ ಅಂತ್ಯಕ್ರಿಯೆ, ಮುಗಿಲು ಮುಟ್ಟಿದ ಆಕ್ರಂದನ 

Views: 204

ಬೆಂಗಳೂರು, ದುರಂತ ಸಾವಿಗೆ ಬಲಿಯಾದ ಐಟಿ ಕಂಪೆನಿ ಮಾಲೀಕ ಚಂದ್ರಮ್ ಯೇಗಪ್ಪಗೋಳ ಹಾಗೂ ಅವರ ಕುಟುಂಬಸ್ಥರ ಮೃತದೇಹಗಳು ಇಂದು ಬೆಳಿಗ್ಗೆ ಹುಟ್ಟೂರು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಗ್ರಾಮಕ್ಕೆ ತಲುಪಿದ್ದು,ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಗ್ರಾಮಸ್ಥರು ಭಾರೀ ಸಂಖ್ಯೆಯಲ್ಲಿ ಮೃತಪಟ್ಟವರ ಅಂತಿಮ ದರ್ಶನ ಪಡೆಯಲು ಬಂದಿದ್ದುಕಣ್ಣೀರು ಹಾಕಿದ್ದಾರೆ.ಚಂದ್ರಮ್ ಯೇಗಪ್ಪಗೋಳ (48), ಗೌರಬಾಯಿ(42), ಜಾನ್(16) ದೀಕ್ಷಾ(12), ವಿಜಯಲಕ್ಷೀ(36) ಪಾರ್ಥಿವ ಶರೕರದ ಅಂತ್ಯಕ್ರಿಯೆ ನಡೆದಿದೆ. ಐಎಎಸ್ಟಿ ಸಾಫ್‌್ಟವೇರ್ ಸಲ್ಯೂಷನ್ ಕಂಪೆನಿ ನೌಕಕರು ಕೂಡ ಅಂತಿಮ ನಮನ ಸಲ್ಲಿಸಿದ್ದಾರೆ.

ಬೆಂಗಳೂರು ಮಾರ್ಟಿಯಲ್ ವೋಲ್ವೋ ಕಾರ್ಸ್ ಶೋ ರೂಮ್ನಲ್ಲಿ ಚಂದ್ರಮ್ ಅವರು ಆ.21ರಂದು ವೋಲ್ವೋ ಎಕ್ಸ್ ಇ 90 ಕಾರು ಖರೀದಿ ಮಾಡಿದ್ದರು. ಇದರ ವಿಡಿಯೋವನ್ನು ಮಾರ್ಟಿಯಲ್ ವೋಲ್ವೋ ಕಾರ್ಸ್ ನವೆಂಬರ್ 5ರಂದು ತನ್ನ ಇನ್ಸಾಗ್ರಾಮ್ ಪೇಜ್ನಲ್ಲಿ ಹಂಚಿಕೊಂಡಿತ್ತು. ಈ ವಿಡಿಯೋಗೆ ಸಾಕಷ್ಟು ಮಂದಿ ಸಂತಾಪ ವ್ಯಕ್ತಪಡಿಸಿದ್ದಾರೆ.ಕಂಪನಿ ಕೂಡ ಮೃರ ಆತಕ್ಕೆ ಶಾಂತಿ ಕೋರಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕೇಂದ್ರ ವಲಯ ಐಜಿಪಿ ಲಾಬೂ ರಾಮ್ ಮಾತನಾಡಿ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಅಪಘಾತದ ಸಂಬಂಧ ಇಡೀ ಪ್ರಕರಣದ ತನಿಖೆ ನಡೆಸಲು ಪೊಲೀಸ್ ಇಲಾಖೆ ವಿಶೇಷ ತನಿಖಾಧಿಕಾರಿಯಾಗಿ ನೆಲಮಂಗಲ ಉಪವಿಭಾಗದ ಉಪ ಅಧೀಕ್ಷಕ ಜಗದೀಶ್ ಅವರನ್ನು ನೇಮಕ ಮಾಡಿಲಾಗಿದೆ ಎಂದು ತಿಳಿಸಿದ್ದಾರೆ

Related Articles

Back to top button