ಜ್ಯೂನಿಯರ್ ಜೆ.ಸಿ ಕುಂದಾಪುರ ವತಿಯಿಂದ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಸನ್ಮಾನ ಕಾರ್ಯಕ್ರಮ

Views: 101
ಕನ್ನಡ ಕರಾವಳಿ ಸುದ್ದಿ: ಜ್ಯೂನಿಯರ್ ಜೆ.ಸಿ.ಕುಂದಾಪುರ ಸಿಟಿ ಇವರ ಆಶ್ರಯದಲ್ಲಿ ಕುಂದಾಪುರದ ಆರ್.ಎನ್.ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ಸಮಾರಂಭದಲ್ಲಿ ‘ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ’ ದ ಅಂಗವಾಗಿ ಆರ್. ಎನ್. ಎಸ್. ಸಂಯುಕ್ತ ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.
ಓರಿಯಂಟೇಶನ್ ಮತ್ತು ಯುತ್ ಎಫೇರ್ಸ್ ನ ರಾಷ್ಟ್ರೀಯ ನಿರ್ದೇಶಕರಾದ SNR. PPF. ಹುಸೇನ್ ಹೈಕಾಡಿಯವರು ಸನ್ಮಾನಿತರಾದ ನವೀನ ಕುಮಾರ್ ಶೆಟ್ಟಿಯವರ ಸಾಮಾಜಿಕ ಕೊಡುಗೆಗಳ ಬಗ್ಗೆ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ತಿಳಿಸಿದರು. ಸೀನಿಯರ್ ಛೇಂಬರ್ಸ್ ಇಂಟರ್ ನ್ಯಾಶನಲ್ ನ ರಾಷ್ಟ್ರೀಯ ಅಧ್ಯಕ್ಷ SNR PPF ಎಮ್. ಆರ್. ಜಯೇಶ್, SCI ನ ಏರಿಯಾ-G ಇದರ ರಾಷ್ಟ್ರೀಯ ಉಪಾಧ್ಯಕ್ಷ SNR PPF ಸಿದ್ಧಗಂಗಯ್ಯ, ಕೋಟಾ ಲೀಜನ್ ನ ಅಧ್ಯಕ್ಷ SNR ಕೇಶವ ಆಚಾರ್, ಜೆಜೆಸಿ ಸುಮೇಧಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ‘ ಸೇವ್ ವಾಟರ್’ ಥೀಮ್ ನ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಕಾಲೇಜಿನ ವಿಜ್ಞಾನ ವಿಬಾಗದ ವಿದ್ಯಾರ್ಥಿನಿ ಶರಧಿ ಪ್ರಾರ್ಥಿಸಿದರು. JCI ಕುಂದಾಪುರ ಸಿಟಿ ಜೆ.ಸಿ ಯ ಅಧ್ಯಕ್ಷ JC ಸಲೀಮ್ ರವರು ಧನ್ಯವಾದ ಸಲ್ಲಿಸಿದರು. ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಜಯಶೀಲಾ ಪೈಯವರು ಕಾರ್ಯಕ್ರಮ ನಿರೂಪಿಸಿದರು.






