ಇತರೆ

ಜ್ಯುವೆಲರಿ ಶಾಪ್ ನಲ್ಲಿ ಕೈಚಳಕ:1.13 ಕೋಟಿ ರೂ. ಚಿನ್ನಾಭರಣ ಕದ್ದೊಯ್ದ ಲೇಡೀಸ್ ಕಳ್ಳಿಯರು

Views: 106

ಕನ್ನಡ ಕರಾವಳಿ ಸುದ್ದಿ: ಬಂಗಾರದ ಅಂಗಡಿಯಲ್ಲಿ ಕಳ್ಳಿಯರು ಕೈಚಳಕ ತೋರಿದ್ದು, 1.13 ಕೋಟಿ ರೂಪಾಯಿ ಮೌಲ್ಯದ ಬಂಗಾರ ಕದ್ದೊಯ್ದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನ್ಯಾಮತಿ ಕೇಸ್ ಭೇದಿಸಿದ್ದ ದಾವಣಗೆರೆ ಪೊಲೀಸರಿಗೆ ಮತ್ತೊಂದು ಪ್ರಕರಣ ಸವಾಲಾಗಿದೆ. 1.13 ಕೋಟಿ ಬೆಲೆಯ ಬಂಗಾರ ಕದ್ದೊಯ್ದ ಕಳ್ಳಿಯರ ಗ್ಯಾಂಗ್ ರವಿ ಜ್ಯುವೆಲರಿ ಶಾಪ್ ನಲ್ಲಿ ಕೈಚಳಕ ತೋರಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ದಾವಣಗೆರೆಯ ಮಂಡಿ ಪೇಟೆಯಲ್ಲಿರುವ ಜ್ಯುವೆಲರಿ ಶಾಪ್ ಗೆ ಬಂದಿದ್ದ ಕಳ್ಳಿಯರು ಕೆಲಸಗಾರರ ಗಮನ ಬೇರೆಡೆಗೆ ಸೆಳೆದು 1 ಕೆಜಿ 400 ಗ್ರಾಂ ಬಂಗಾರದ ಆಭರಣಗಳನ್ನು ಕದ್ದೊಯ್ದಿದೆ. ಐವರು ಅಂಗಡಿಗೆ ಬೆಳ್ಳಿ ಲೋಟ ಕೇಳಿಕೊಂಡು ಬಂದಿದ್ದು, ಕೆಲಸದವರು ಬೆಳ್ಳಿ ಲೋಟ ತೋರಿಸುವ ವೇಳೆ ಬಂಗಾರದ ಆಭರಣ ಇರುವ ಬಾಕ್ಸ್ ಅನ್ನು ಚಾಲಕಿ ಕಳ್ಳಿ ಎಗರಿಸಿದ್ದಾಳೆ. ಬಾಕ್ಸ್‌ನಲ್ಲಿ ಇಟ್ಟಿದ್ದ ಕಿವಿ ಓಲೆ, ಜುಮುಕಿಯನ್ನು ಕಳ್ಳಿಯರ ಗ್ಯಾಂಗ್ ತೆಗೆದುಕೊಂಡು ಹೋಗಿದೆ. ಕಳ್ಳಿಯ ಕೈಚಳಕ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿ ಟಿವಿ ಆಧರಿಸಿ ಕಳ್ಳಿಯರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Related Articles

Back to top button