ಇತರೆ

ಸಹ-ಶಿಕ್ಷಕಿಯನ್ನು ಮನೆಗೆ ಕರೆದುಕೊಂಡು ಬಂದಿದ್ದ ಗಂಡ ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಹೆಂಡತಿ!

Views: 192

ತುಮಕೂರು: ಒಂದೇ ಶಾಲೆಯ ಶಿಕ್ಷಕ ಹಾಗೂ ಶಿಕ್ಷಕಿಯ ನಡುವೆ ಲವ್ವಿ-ಡವ್ವಿ ನಡೆದು ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿರುವ ಘಟನೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ದಸೂಡಿ ಗ್ರಾಮದಲ್ಲಿ ನಡೆದಿದೆ.

ಹೆಂಡತಿ ಇಲ್ಲದಿದ್ದಾಗ ಸಹ ಶಿಕ್ಷಕಿಯನ್ನ ಮನೆಗೆ ಕರೆಸಿಕೊಂಡು ಶಿಕ್ಷಕ ರಂಗನಾಥ್ ಸಿಕ್ಕಿಬಿದ್ದಾನೆ.

ಗಂಡ, ಸಹ-ಶಿಕ್ಷಕಿಯನ್ನು ಮನೆಗೆ ಕರೆದುಕೊಂಡು ಬಂದ ವಿಚಾರ ತಿಳಿದ ರಂಗನಾಥ್ ಪತ್ನಿ ಚಂದ್ರಮ್ಮ ರಾತ್ರೋರಾತ್ರಿ ಮನೆಗೆ ಬಂದು ಗಲಾಟೆ ಮಾಡಿದ್ದಾರೆ. ಗಂಡನ ಜೊತೆಯಲ್ಲಿದ್ದ ಶಿಕ್ಷಕಿಗೆ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ ಚಂದ್ರಮ್ಮ, ನನ್ನ ಹಾಗೂ ನನ್ನ ಮಕ್ಕಳನ್ನು ನನ್ನ ಪತಿ ಬೀದಿಗೆ ತಳ್ಳಿದ್ದಾರೆ. ಅಕ್ರಮ ಸಂಬಂಧ ನಡೆಸುತ್ತಿದ್ದಾರೆಂದು ಆರೋಪಿಸಿದ್ದಾರೆ.

ಪತಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಆಕ್ರೋಶ ವ್ಯಕ್ತಪಡಿಸಿರುವ ಚಂದ್ರಮ್ಮ ಇಬ್ಬರೂ ಗುಟ್ಟಾಗಿ ಮದುವೆಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಶಿಕ್ಷಕ ರಂಗನಾಥ್ ವಿರುದ್ಧ ಪತ್ನಿ ಚಂದ್ರಮ್ಮ ಹುಳಿಯಾರು ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗಂಡನ ಜೊತೆ ಸಲುಗೆ ಬೆಳೆಸಿರುವ ಶಿಕ್ಷಕಿಯನ್ನು ಬೇರೆ ಕಡೆಗೆ ವರ್ಗಾವಣೆ ಮಾಡುವಂತೆಯೂ ಒತ್ತಾಯ ಮಾಡಿದ್ದಾರೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ದಸೂಡಿ ಬಳಿಯ ಎಂ.ಕೆ ಹಟ್ಟಿ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ರಂಗನಾಥ್‌ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈತನ ವಿರುದ್ಧವೂ ಶಿಕ್ಷಣ ಇಲಾಖೆ ಸರಿಯಾದ ಕ್ರಮ ತೆಗೆದುಕೊಳ್ಳಬೇಕೆಂದು ಪತ್ನಿ ಚಂದ್ರಮ್ಮ ಆಗ್ರಹಿಸಿದ್ದಾರೆ.

Related Articles

Back to top button