ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್..! ಕಂಠ ಪಾಠಕ್ಕೆ ಗುಡ್ ಬೈ, ಇನ್ಮುಂದೆ ಪುಸ್ತಕ ನೋಡಿ ಪರೀಕ್ಷೆ ಬರೆಯುವ ಅವಕಾಶ

Views: 497
ಕನ್ನಡ ಕರಾವಳಿ ಸುದ್ದಿ: ಇಷ್ಟು ದಿನ ಮನೆಯಲ್ಲಿ ಓದಿಕೊಂಡು ಹೋಗಿ ಶಾಲಾ ಮಕ್ಕಳು ಪರೀಕ್ಷೆ ಬರೆಯುತ್ತಿದ್ದರು. ಇನ್ಮುಂದೆ ಪರೀಕ್ಷೆಯಲ್ಲಿ ಉತ್ತರ ಬರೆಯಲು ವಿದ್ಯಾರ್ಥಿಗಳ ಕೈಗೆ ಪುಸ್ತಕವನ್ನೇ ಕೊಡುತ್ತಾರಂತೆ.
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಸಿ)ಯು 9ನೇ ತರಗತಿ ಓದುವ ವಿದ್ಯಾರ್ಥಿಗಳಿಗೆ ತೆರೆದ ಪುಸ್ತಕ ಪರೀಕ್ಷಾ ಪದ್ಧತಿಯನ್ನು ಜಾರಿಗೆ ತರಲು ಮುಂದಾಗಿದೆ. ಅಂದರೆ ಇನ್ನು ಮುಂದೆ ಪುಸ್ತಕ ನೋಡಿ ಪರೀಕ್ಷೆ ಬರೆಯುವ ಅವಕಾಶವನ್ನು ನೀಡಲಾಗುತ್ತಿದೆ. 2026-27ರಿಂದ ಇದು ಜಾರಿಗೆ ಬರುತ್ತದೆ. ಕಂಠ ಪಾಠಕ್ಕೆ ಗುಡ್ ಬೈ ಹೇಳಿ, ಸಾಮರ್ಥ್ಯ ಕೌಶಲಕ್ಕೆ ಹಾಯ್ ಹಾಯ್ ಹೇಳಲಾಗುತ್ತಿದೆ. ಅಂದರೆ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯ ಕೌಶಲಕ್ಕೆ ಇಲ್ಲಿ ಹೆಚ್ಚಿನ ಸಮಯ ನೀಡಲಾಗುತ್ತದೆ.
ಕೇಂದ್ರೀಯ ಮಾಧ್ಯಮ ಶಿಕ್ಷಣ ಮಂಡಳಿ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ಮಾಡಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ತೆರೆದ ಪುಸ್ತಕ ಪರೀಕ್ಷಾ ಪದ್ಧತಿ ಜಾರಿ ಮಾಡಲಾಗುತ್ತಿದೆ. ಹೀಗಾಗಿ ಇನ್ಮುಂದೆ ವಿದ್ಯಾರ್ಥಿಗಳು ಪಠ್ಯ ಪುಸ್ತಕ ನೋಡಿ ಪರೀಕ್ಷೆ ಬರೆಯಲು ಅವಕಾಶ ಇರುತ್ತದೆ. ಹಳೆಯ ಪರೀಕ್ಷಾ ಪದ್ಧತಿ ಕಂಠ ಪಾಠಕ್ಕೆ ಸಮಯ ಕೊಡುತ್ತೆ ಅನ್ನೋ ವಾದ ಇತ್ತು. ಈಗಿನ ಹೊಸ ಪರೀಕ್ಷಾ ಪದ್ಧತಿ ವಿದ್ಯಾರ್ಥಿ ಸಾಮರ್ಥ್ಯವನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಇಂತಹ ಕ್ರಮ ಆಯ್ಕೆ ಮಾಡುವ ಅನುಸರಿಸುವ ಹಕ್ಕು ಆಯಾ ಶಾಲೆಗಳಿಗೆ ಬಿಟ್ಟಿರುತ್ತದೆ.






