ಕರಾವಳಿ
ಮರವಂತೆ: ಲಾರಿಯೊಂದರಲ್ಲಿ ಮಲಗಿದ ಸ್ಥಿತಿಯಲ್ಲಿ ಚಾಲಕನ ಶವ ಪತ್ತೆ!

Views: 111
ಕುಂದಾಪುರ: ತ್ರಾಸಿ ಮರವಂತೆ ಬೀಚ್ ಹೆದ್ದಾರಿ ಪಕ್ಕದಲ್ಲಿ ಲಾರಿಯೊಂದರಲ್ಲಿ ಚಾಲಕನ ಶವ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತ ಚಾಲಕ ಆಂಧ್ರಪ್ರದೇಶ ಮೂಲದ ಬಾಬುರಾಯ್ ಎಂದು ಗುರುತಿಸಲಾಗಿದೆ. ಜೊತೆಯಲ್ಲಿದ್ದ ಶ್ರೀವಾಸ್ ತಿಳಿಸಿದ್ದಾರೆ.
ತ್ರಾಸಿ ಮರವಂತೆ ಬೀಚ್ ಬದಿಯ ವರಹಾ ಸ್ವಾಮಿ ದೇವಸ್ಥಾನದ ಎದುರಿನ ಹೆದ್ದಾರಿಯಲ್ಲಿ ತಾಂತ್ರಿಕ ದೋಷದಿಂದ ಆರು ದಿನಗಳಿಂದ ನಿಂತಿದ್ದ ಲಾರಿಯಲ್ಲಿ ಈ ಘಟನೆ ಸಂಭವಿಸಿದೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಹಿಂದೆ ಕುಂದಾಪುರ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದ ಲಾರಿ ಚಾಲಕ ಬುಧವಾರ ಬೆಳಿಗ್ಗೆ ಮೃತ ಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಶವವನ್ನು ಮಣಿಪಾಲ ಆಸ್ಪತ್ರೆಯ ಶೀತಲೀಕರಣ ಘಟಕದಲ್ಲಿ ಇರಿಸಲಾಗಿದೆ.