ಮಕ್ಕಳ ಕೈಯಲ್ಲಿ ಮಾಲ್ಡೀವ್ಸ್ ಯಾಕೆ? ತ್ರಾಸಿ ಮರವಂತೆ ಓಕೆ..! ಕೂಗು ಎಲ್ಲೆಡೆ ವೈರಲ್…

Views: 67
ಮರವಂತೆ: ಲಕ್ಷದ್ವೀಪಕ್ಕೆ ತಮ್ಮ ಭೇಟಿಯ ಚಿತ್ರಗಳನ್ನು ಹಂಚಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತೀಯರು ತಮ್ಮ ಪ್ರವಾಸಿ ತಾಣವನ್ನಾಗಿ ದ್ವೀಪವನ್ನು ಆಯ್ಕೆ ಮಾಡುಕೊಳ್ಳುವಂತೆ ಪ್ರಚಾರ ಮಾಡಿದ್ದರು. ಇದರ ಬಳಿಕ ಶಿಯುನಾ ಅವರು ಪ್ರಧಾನಿ ಮೋದಿ ಅವರನ್ನು ‘ವಿದೂಷಕ’ ಮತ್ತು ‘ಕೈಗೊಂಬೆ’ ಎಂದು ವ್ಯಂಗ್ಯವಾಡಿದ್ದರು. ಈ ಟ್ವೀಟ್‌ಗಳು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಕ್ರಿಕೆಟ್ ತಾರೆ ವೀರೇಂದ್ರ ಸೆಹವಾಗ್ ತ್ರಾಸಿ-ಮರವಂತೆ ಬೀಚ್ ಸೌಂದರ್ಯದ ಬಗ್ಗೆ ಜಾಲತಾಣದಲ್ಲಿ ಹಂಚಿಕೊಂಡಿರುವ ಬೆನ್ನಲ್ಲೇ ಶಾಸಕ ಗುರುರಾಜ್ ಗಂಟಿಹೊಳೆ ಸೇರಿದಂತೆ ಸಾರ್ವಜನಿಕರು ಮಾಲ್ದೀವ್ಸ್ ಯಾಕೆ? ತ್ರಾಸಿ ಮರವಂತೆ ಓಕೆ, ಎನ್ನುವ ಸಂದೇಶ ಸಾರುತ್ತಿದ್ದಾರೆ.
ಸೆಹ್ವಾಗ್ ಅವರ ಈ ಪೋಸ್ಟ್‌ಗೆ ಎಕ್ಸ್ ಬಳಕೆದಾರರೊಬ್ಬರು ಉಡುಪಿ ಕುಂದಾಪುರಕ್ಕೆ ಯಾವತ್ತಾದರೂ ಭೇಟಿ ನೀಡಿದ್ದೀರಾ ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸೆಹ್ವಾಗ್ ಹೌದು, ಉಡುಪಿ ನಿಜಕ್ಕೂ ಅದ್ಬುತ. ಪ್ರಾಚೀನ ಕಡಲತೀರಗಳು, ದೇವಾಲಯ ಮತ್ತು ಅದ್ಭುತ ಆಹಾರಗಳಿವೆ ಎಂದು ಕರಾವಳಿ ಜಿಲ್ಲೆಯನ್ನು ಹೊಗಳಿದ್ದಾರೆ.
ಜ.11ರಂದು ಈ ಅಭಿಯಾನಕ್ಕೆ ಉಪ್ಪುಂದ ಮಡಿಕಲ್ ಸ.ಹಿ.ಪ್ರಾ., ಕಳುಹಿತ್ಲು ಉರ್ದು ಸ.ಕಿ.ಪ್ರಾ. ಶಾಲೆ, ತಾರಾಪತಿ ಸ.ಹಿ.ಪ್ರಾ. ಶಾಲೆ ಮತ್ತು ಕಡಲತಡಿಗೆ ಹೊಂದಿಕೊಂಡ ಹಲವಾರು ಸರಕಾರಿ ಶಾಲೆಯ ವಿದ್ಯಾರ್ಥಿಗಳು ತ್ರಾಸಿ-ಮರವಂತೆ ಬೀಚ್‌ಗೆ ತೆರಳಿಸಿ ಸಾಥ್ ನೀಡಿದರು.
ವಿದ್ಯಾರ್ಥಿಗಳು ತಾವೇ ತಯಾರಿಸಿದ ಪ್ಲೇ ಕಾರ್ಡ್ಸ್ ಪ್ರದರ್ಶಿಸುವ ಮೂಲಕ ವೀರೇಂದ್ರ ಸೆಹವಾಗ್ ಅವರನ್ನು ಬೈಂದೂರಿಗೆ ಕೈಬೀಸಿ ಕರೆಯುತ್ತಿದ್ದಾರೆ. ಮಕ್ಕಳ ಕೈಯಲ್ಲಿ ಮಾಲ್ಡೀವ್ಸ್ ಯಾಕೆ? ತ್ರಾಸಿ ಮರವಂತೆ ಓಕೆ,
ಸೆಹವಾಗ್ ಅವರು ಹಾಕಿದ ಮರವಂತೆ ಕಿನಾರೆಯ ಫೋಟೋ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಮಾಲ್ಡೀವ್ಸ್ ಯಾಕೆ? ತ್ರಾಸಿ ಮರವಂತೆ ಓಕೆ ಎನ್ನುವ ಕೂಗು ಎಲ್ಲೆಡೆ ಕೇಳಿಬರುತ್ತಿದೆ.
ಕೊಡಚಾದ್ರಿಯ ಚಾರಣ, ಮರವಂತೆಯ ಬೀಚ್ ವಾಕ್, ಪಡುವರಿಯ ಸಮುದ್ರ ಎಂದೆಲ್ಲ ಬರೆದಿರುವ ಕಾರ್ಡ್‌ಗಳ ಜತೆಗೆ ಉತ್ಸಾಹದ ಧ್ವನಿಯೊಂದಿಗೆ ಘೋಷಣೆ ಕೂಗುತ್ತಾ ಶಾಲಾ ಮಕ್ಕಳು ಸ್ಥಳೀಯ ಪ್ರವಾಸಿ ತಾಣಗಳ ಸೊಬಗನ್ನು ಆಸ್ವಾದಿಸಿ ಎಂದು ಮನವಿ ಮಾಡಿದರು.