ಬೈಕ್ ನಿಂದ ಆಯತಪ್ಪಿ ಬಿದ್ದು ತಂದೆ-ಮಗಳು ದಾರುಣ ಸಾವು

Views: 103
ಬೆಂಗಳೂರು,ವೇಗವಾಗಿ ಹೋಗುತ್ತಿದ್ದ ಬೈಕ್ ಆಯತಪ್ಪಿ ಬಿದ್ದು ತಂದೆ-ಮಗಳು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ತಾಯಿ ಗಂಭೀರ ಗಾಯಗೊಂಡಿರುವ ದಾರುಣ ಘಟನೆ ನೆಲಮಂಗಲದ ಅಡಕಿಮಾರನಹಳ್ಳಿಯ ಫ್ಲೈಓವರ್ ರಸ್ತೆಯಲ್ಲಿ ಸಂಭವಿಸಿದೆ.
ನೆಲಮಂಗಲ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಯಮಹಾ ಬೈಕ್ ನಲ್ಲಿ ಇಂದು ಬೆಳಿಗ್ಗೆ 8.20 ರ ವೇಳೆ ದಂಪತಿ ಹಾಗೂ ಮಗಳು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ದುರ್ಘಟನೆ ನಡೆದಿದೆ.
ತುಮಕೂರು ಜಿಲ್ಲೆಯ ಚೇಳೂರು ಮೂಲದ ನಗರದ ಮಾಗಡಿ ರಸ್ತೆಯಲ್ಲಿ ವಾಸಿಸುತ್ತಿದ್ದ ಅಮಿತ್ (38) ಹಾಗೂ ಅವರ ಮಗಳು ಅನ್ವಿತಾ(5) ಮೃತಪಟ್ಟವರು.
ಗಂಭೀರವಾಗಿ ಗಾಯಗೊಂಡ ಅಮಿತ್ ಅವರ ಪತ್ನಿ ಕುಸುಮಗೆ ಅವರನ್ನು ಅಭಯ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ.
ಸಂಕ್ರಾಂತಿ ಹಬ್ಬವನ್ನು ಮುಗಿಸಿಕೊಂಡು ಚೇಳೂರಿನಿಂದ ತುಮಕೂರು ಮಾರ್ಗವಾಗಿ ನಗರದ ಮಾಗಡಿ ರಸ್ತೆಯ ಮನೆಗೆ ಯಮಹಾ ಬೈಕ್ ನಲ್ಲಿ ಬರುವಾಗ ಅಪಘಾತ ಸಂಭವಿಸಿದೆ. ಮೃತರ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭಿಸಿಲ್ಲ. ಘಟನಾ ಸ್ಥಳಕ್ಕೆ ನೆಲಮಂಗಲ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.