ಕರಾವಳಿ

ಬಂಟ್ವಾಳ ಕೊಲೆ ಪ್ರಕರಣ: ಗಾಯಾಳು ಶಫಿಯಿಂದ ಮಹತ್ವದ ಹೇಳಿಕೆಯೇನು?

Views: 234

ಕನ್ನಡ ಕರಾವಳಿ ಸುದ್ದಿ: ಬಂಟ್ವಾಳದಲ್ಲಿ ಅಬ್ದುಲ್ ರಹೀಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 15 ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಗಾಯಗೊಂಡ ಕಲಂದರ್ ಶಫಿ ನೀಡಿರುವ ಮಾಹಿತಿ ಆಧಾರದ ಮೇಲೆ ನಿಸಾರ್ ಎಂಬವವರು ಕೊಟ್ಟ ದೂರಿನಡಿ ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಆಗಿದೆ.

ರಹೀಮಾನ್ಗೆ ಪರಿಚಯಸ್ಥರಿಂದಲೇ ಅಟ್ಯಾಕ್ ಆಗಿದೆ ಎನ್ನಲಾಗಿದ್ದು, ಈ ಸಂಬಂಧ ದೀಪಕ್, ಸುಮಿತ್ ಸೇರಿ 15 ಜನರ ವಿರುದ್ದ ಎಫ್ಐಆರ್ ದಾಖಲಾಗಿದೆ.

ಬಿಎನ್ಎಸ್ 103 (ಕೊಲೆ), 109 (ಕೊಲೆಯತ್ನ) ಸೇರಿದಂತೆ ಹಲವು ಸೆಕ್ಷನ್ಗಳಡಿ ಕೇಸ್ ದಾಖಲಾಗಿದೆ. ಅಬ್ದುಲ್ ರಹೀಮಾನ್ ಮತ್ತು ಕಲಂದರ್ ಶಫಿ ಹೊಳೆ ಬದಿಯಿಂದ ಪಿಕ್ಅಪ್ ವಾಹನದಲ್ಲಿ ಮರಳು ಲೋಡ್ ಮಾಡಿದ್ದರು. ಅದನ್ನು ಕುರಿಯಾಳ ಗ್ರಾಮದ ಈರಾ ಕೋಡಿಯ ರಾಜೀವಿ ಎಂಬುವವರ ಮನೆ ಬಳಿ ಇಳಿಸುತ್ತಿದ್ದರು.. ಈ ವೇಳೆ ದಾಳಿಯಾಗಿದೆ ಎನ್ನಲಾಗಿದೆ.

ಗಾಯಾಳು ಶಫಿ ಹೇಳಿದ್ದೇನು..?

ಪರಿಚಯಸ್ಥರಾದ ದೀಪಕ್, ಸುಮಿತ್ ಮತ್ತು 15 ಮಂದಿಯಿಂದ ಏಕಾಏಕಿ ದಾಳಿಯಾಗಿದೆ. ಚಾಲಕನ ಸೀಟಿನಲ್ಲಿದ್ದ ಅಬ್ದುಲ್ ರಹೀಮಾನ್ ಅವರನ್ನು ಹೊರಗೆ ಎಳೆದು ತಲವಾರು, ಚೂರಿ, ರಾಡ್ಗಳೊಂದಿಗೆ ಯದ್ವಾ-ತದ್ವಾ ದಾಳಿ ಮಾಡಿದ್ದಾರೆ. ಅಲ್ಲಿದ್ದವರು ಬೊಬ್ಬೆ ಹಾಕಿದ್ದರಿಂದ ಹಲ್ಲೆ ಮಾಡಿದ ಆರೋಪಿಗಳು ಮಾರಕಾಸ್ತ್ರಗಳೊಂದಿಗೆ ಪರಾರಿ ಆಗಿದ್ದಾರೆ. ಹಲ್ಲೆಗೈದವರ ಪೈಕಿ ಇಬ್ಬರು ಪರಿಚಯಸ್ಥರು ಎಂದು ಹಲ್ಲೆಗೊಳಗಾಗಿ ಆಂಬ್ಯುಲೆನ್ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಕಲಂದ‌ರ್ ಶಾಫಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಗೆ ದಾಖಲಿಸಿದ್ದ ಮಹಮ್ಮದ್ ನಿಸಾ‌ರ್ ಎಂಬವವರು ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Related Articles

Back to top button