ಜನಮನ

ಪಾಕ್ ಯುವತಿಯನ್ನು ಮದುವೆಯಾದ ಸಿಆರ್‌ಪಿಎಫ್‌ ಯೋಧ ಸೇವೆಯಿಂದ ವಜಾ ಪ್ರಶ್ನಿಸಿ ಹೈಕೋರ್ಟ್‌ಗೆ 

Views: 147

ಕನ್ನಡ ಕರಾವಳಿ ಸುದ್ದಿ: ಪಾಕಿಸ್ತಾನಿ ಯುವತಿಯನ್ನು ಮದುವೆಯಾದ ಕಾರಣ ಸೇವೆಯಿಂದ ವಜಾಗೊಂಡ ಸಿಆರ್‌ಪಿಎಫ್‌ ಯೋಧ ಮುನೀರ್ ಅಹ್ಮದ್ ಅವರು, ತಮ್ಮ ವಜಾ ಪ್ರಶ್ನಿಸಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾವೇದ್‌ ಇಟ್ಬಾಲ್ ವಾನಿ ಅವರು, ಪ್ರತಿವಾದಿಗಳಾದ ಸಿಆರ್‌ಪಿಎಫ್‌ ಮಹಾನಿರ್ದೇಶಕರು ಮತ್ತು ಭೋಪಾಲ್‌(ಮಧ್ಯಪ್ರದೇಶ) ದಲ್ಲಿರುವ ಸಿಆರ್‌ಪಿಎಫ್‌ನ 41 ಬೆಟಾಲಿಯನ್ ಹಾಗೂ ಜಮ್ಮು ಮತ್ತು ಕಾಶ್ಮೀರದ ರಾಜೇರಿ ಜಿಲ್ಲೆಯ ಸೋದ್ರಾ, ಸುಂದರ್‌ಬಾನಿಯಲ್ಲಿರುವ 72 ಬೆಟಾಲಿಯನ್‌ನ ಕಮಾಂಡೆಂಟ್‌ಗಳಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.

ಮುಂದಿನ ವಿಚಾರಣೆ ಜೂನ್ 30ಕ್ಕೆ ನಿಗದಿ ಯಾಗಿದ್ದು, ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ನ್ಯಾಯಾಲಯ, ಪ್ರತಿವಾದಿಗಳಿಗೆ ಸೂಚಿಸಿದೆ.

 

Related Articles

Back to top button