ನ.29ಕ್ಕೆ ಭಾರತೀಯ ಸಂವಿಧಾನದ ಪೂರ್ವ ಪೀಠಿಕೆಯಲ್ಲಿ “ಸಮಾಜವಾದಿ” ಮತ್ತು “ಜಾತ್ಯಾತೀತ” ತೀರ್ಪು

Views: 98
ಕನ್ನಡ ಕರಾವಳಿ ಸುದ್ದಿ: ಸಂವಿಧಾನದ ಪೀಠಿಕೆಯಲ್ಲಿ “ಸಮಾಜವಾದಿ” ಮತ್ತು “ಜಾತ್ಯತೀತ” ಪದಗಳನ್ನು ಸೇರಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ತೀರ್ಪನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಕಾಯ್ದಿರಿಸಿದೆ. ರಾಜ್ಯಸಭಾ ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ, ವಕೀಲ ವಿಷ್ಣು ಶಂಕರ್ ಜೈನ್ ಮತ್ತು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠವು ನವೆಂಬರ್ 25ರಲ್ಲಿ ತನ್ನ ಆದೇಶವನ್ನು ಪ್ರಕಟಿಸುವುದಾಗಿ ಹೇಳಿದೆ. ಸಂವಿಧಾನದ ಪೀಠಿಕೆಯ“ತಿದ್ದುಪಡಿಯನ್ನು (42 ನೇ ತಿದ್ದುಪಡಿ) ಈ ನ್ಯಾಯಾಲಯವು ಸಾಕಷ್ಟು ನ್ಯಾಯಾಂಗ ಪರಿಶೀಲನೆಗೆ ಒಳಪಡಿಸಿದೆ. ಸಂಸತ್ತು ಮಧ್ಯಪ್ರವೇಶಿಸಿದೆ. ಆ ಸಮಯದಲ್ಲಿ (ತುರ್ತು ಪರಿಸ್ಥಿತಿ) ಸಂಸತ್ತು ಏನೂ ಮಾಡಿಲ್ಲ ಎಂದು ನಾವು ಹೇಳಲು ಸಾಧ್ಯವಿಲ್ಲ” ಎಂದು ಸಿಜೆಐ ಹೇಳಿದ್ದಾರೆ.
ಅದಾಗ್ಯೂ, ಪ್ರಕರಣವನ್ನು ದೊಡ್ಡ ಪೀಠಕ್ಕೆ ಉಲ್ಲೇಖಿಸುವಂತೆ ಅರ್ಜಿದಾರರು ಕೋರಿದ್ದ ಮನವಿಯನ್ನು ಪೀಠವು ನಿರಾಕರಿಸಿದ್ದು, “ಸಮಾಜವಾದಿಯಾಗಿರುವುದು” ಎಂಬುವುದು ಭಾರತೀಯ ಅರ್ಥದಲ್ಲಿ “ಕಲ್ಯಾಣ ರಾಜ್ಯ” ಎಂದು ತಿಳಿಯಲಾಗಿದೆ ಎಂದು ಹೇಳಿದ್ದಾರೆ. ಸಂವಿಧಾನದ ಪೀಠಿಕೆಯ
ವಿಚಾರಣೆ ವೇಳೆ “ಸಮಾಜವಾದಿ” ಪದದ ವ್ಯಾಖ್ಯಾನವನ್ನು ಬಹುಸಂಖ್ಯಾತರು ಅನುಮಾನಿಸಿದ್ದಾರೆ ಎಂದು ವಕೀಲ ಜೈನ್ ಪ್ರತಿಪಾದಿಸಿದ್ದಾರೆ. ದಿವಂಗತ ಪ್ರಧಾನಿ ಇಂದಿರಾ ಗಾಂಧಿಯವರು ಜೂನ್ 25, 1975 ರಿಂದ ಮಾರ್ಚ್ 21, 1977 ರವರೆಗೆ ಭಾರತದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು.
“ಭಾರತದಲ್ಲಿ ನಾವು ಸಮಾಜವಾದವನ್ನು ಅರ್ಥಮಾಡಿಕೊಳ್ಳುವ ವಿಧಾನವು ಇತರ ದೇಶಗಳಿಗಿಂತ ಬಹಳ ಭಿನ್ನವಾಗಿದೆ. ನಮ್ಮ ಸಂದರ್ಭದಲ್ಲಿ, ಸಮಾಜವಾದವು ಪ್ರಾಥಮಿಕವಾಗಿ ಕಲ್ಯಾಣ ರಾಜ್ಯ ಎಂದರ್ಥ. ಅಷ್ಟೆ. ಉತ್ತಮವಾಗಿ ಅಭಿವೃದ್ಧಿ ಹೊಂದುತ್ತಿರುವ ಖಾಸಗಿ ವಲಯವನ್ನು ಅದು ಎಂದಿಗೂ ತಡೆಯಲಿಲ್ಲ. ನಾವೆಲ್ಲರೂ ಅದರಿಂದ ಪ್ರಯೋಜನ ಪಡೆದಿದ್ದೇವೆ” ಎಂದು ಪೀಠವು ಹೇಳಿದೆ.
ಸಮಾಜವಾದ ಎಂಬ ಪದವನ್ನು ವಿಶ್ವಾದ್ಯಂತ ವಿವಿಧ ಸಂದರ್ಭಗಳಲ್ಲಿ ಬಳಸಲಾಗಿದೆ ಮತ್ತು ಭಾರತದಲ್ಲಿ ಇದರರ್ಥ ಕಲ್ಯಾಣ ರಾಜ್ಯವಾಗಿದೆ. ಅಂದರೆ, ಜನರ ಕಲ್ಯಾಣಕ್ಕಾಗಿ ನಿಲ್ಲಬೇಕು ಮತ್ತು ಸಮಾನ ಅವಕಾಶಗಳನ್ನು ಒದಗಿಸಬೇಕು ಎಂಬ ಅರ್ಥವಾಗಿದೆ ಎಂದು ನ್ಯಾಯಮೂರ್ತಿ ಖನ್ನಾ ಹೇಳಿದ್ದಾರೆ. 1994 ರ ಎಸ್‌ಆರ್ ಬೊಮ್ಮಾಯಿ ಪ್ರಕರಣದಲ್ಲಿ ‘ಜಾತ್ಯಾತೀತೆಯು’ ಸಂವಿಧಾನದ ಮೂಲ ರಚನೆಯ ಭಾಗವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು
ಇನ್ನೊಬ್ಬ ಅರ್ಜಿದಾರರಾದ ವಕೀಲ ಅಶ್ವಿನಿ ಉಪಾಧ್ಯಾಯ ಅವರು, ನಾವು “ಸಮಾಜವಾದ” ಮತ್ತು “ಜಾತ್ಯತೀತತೆ” ಪರಿಕಲ್ಪನೆಗಳಿಗೆ ವಿರುದ್ಧವಾಗಿಲ್ಲ. ಆದರೆ ಪೀಠಿಕೆಗೆ ಅವುಗಳ ಅಳವಡಿಕೆಯನ್ನು ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ.
368ನೇ ವಿಧಿಯು ಸಂವಿಧಾನವನ್ನು ತಿದ್ದುಪಡಿ ಮಾಡುವ ಅಧಿಕಾರವನ್ನು ಸಂಸತ್ತಿಗೆ ನೀಡಿದೆ ಮತ್ತು ಅದು ಪೀಠಿಕೆಗೂ ವಿಸ್ತರಿಸಿದೆ ಎಂದು ಪೀಠ ಹೇಳಿದೆ. “ಪೀಠಿಕೆಯು ಸಂವಿಧಾನದ ಒಂದು ಭಾಗವಾಗಿದೆ” ಎಂದು ಹೇಳಿದೆ.