‘ಜೋಡಿ ನಂಬರ್ 1’ ಶೋನಲ್ಲಿ ಫೈನಲ್ ಪ್ರವೇಶಿಸಿದ ಉಡುಪಿಯ ಐಟಿ ಉದ್ಯೋಗಿ ಗಣೇಶ್ ಕಾರಂತ್ ಜೋಡಿ

Views: 138
ಉಡುಪಿ: ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ರಿಯಾಲಿಟಿ ಶೋಗಳಲ್ಲಿ ಜೋಡಿ ನಂಬರ್ 1 ಸೀಸನ್ -2ರಲ್ಲಿ ಮಿಂಚುತ್ತಿರುವ ಕರಾವಳಿಯ ಐಟಿ ಉದ್ಯೋಗಿ ಗಣೇಶ್ ಕಾರಂತ್ ಹಾಗೂ ಶ್ರೀ ವಿದ್ಯಾ ಈ ಜೋಡಿ ಅಂತಿಮ ಹಂತ ತಲುಪಿದೆ.
ಈ ಇಬ್ಬರು ಜೋಡಿಗಳು ಜೋಡಿ ನಂಬರ್ 1 ಗೆ ಹೋಗುವ ಮೊದಲು ಸಾಕಷ್ಟು ಕಾಮಿಡಿ ವಿಡಿಯೋಗಳನ್ನು ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಚಿರ ಪರಿಚಿತರಾಗಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವವರಿಗೆ ಈ ಜೋಡಿ ಬಗ್ಗೆ ತಿಳಿದೇ ಇರುತ್ತದೆ. ಈ ದಂಪತಿಯ ವಿಡಿಯೋಗಳನ್ನು ನೋಡಿ, ಅನ್ಯೂನ್ಯತೆ ನೋಡಿ ನಿಮ್ಮದು ಲವ್ ಮ್ಯಾರೇಜಾ? ಎಂದು ಕೇಳುತ್ತಿರುತ್ತಾರೆ. ಆ ಬಗ್ಗೆ ಶ್ರೀ ವಿದ್ಯಾ ಹಾಗೂ ಗಣೇಶ್ ಎಲ್ಲರಿಗೆ ಕ್ಲಾರಿಟಿ ಕೂಡ ನೀಡಿದ್ದಾರೆ . ನಾವು ಆರೆಂಜ್ ಮ್ಯಾರೇಜ್ ಅಲ್ಲ ಎಂದಿದ್ದಾರೆ. ವಿದ್ಯಾ ಹಾಗೆ ಇರುವ ಹೆಂಡತಿ ಸಿಕ್ಕಿರುವುದು ನನ್ನ ಪುಣ್ಯ ಎಂದು ಹಲವು ಬಾರಿ ರಿಯಾಲಿಟಿ ಶೋನಲ್ಲಿ ಗಣೇಶ್ ಹೇಳಿಕೊಂಡಿದ್ದಾರೆ.
ಗಣೇಶ್ ಕಾರಂತ್ ಮೂಲತಃ ಉಡುಪಿಯವರು. ಶ್ರೀ ವಿದ್ಯಾ ಚಿಕ್ಕಬಳ್ಳಾಪುರದವರು. ಮದುವೆಗೂ ಮುನ್ನ ಇಬ್ಬರೂ ಪರಿಚಯ ಇರಲಿಲ್ಲ. ಮದುವೆ ಬಳಿಕ ಒಬ್ಬರನ್ನೊಬ್ಬರು ಅರಿತು ಬೆರೆತು ಜೀವನ ಸಾಗಿಸುತ್ತಿದ್ದಾರೆ. ಶೋನಲ್ಲಿ ಗಣೇಶ್ ಹಾಗೂ ಶ್ರೀವಿದ್ಯಾ ಬಹಳ ಆಕ್ಟಿವ್ ಆಗಿ ಇತರ ಸ್ಪರ್ಧಿಗಳಿಗೆ ಪೈಪೋಟಿ ಕೊಡುತ್ತಿದ್ದಾರೆ.
ಜೋಡಿ ನಂ 1′ ಸೀಸನ್- 2 ಅಂತಿಮ ಹಂತ ತಲುಪಿದೆ. ತೀರ್ಪುಗಾರರಾಗಿ ಮಾಳವಿಕಾ ಅವಿನಾಶ್ ಮತ್ತು ‘ನೆನಪಿರಲಿ’ ಪ್ರೇಮ್ ಇದ್ದಾರೆ. ಹಾಗೆಯೇ ಶ್ವೇತಾ ಚೆಂಗಪ್ಪ ಮತ್ತು ಕುರಿ ಪ್ರತಾಪ್ ನಿರೂಪಣೆಯ ಈ ಕಾರ್ಯಕ್ರಮ ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ. ಅಂತಿಮ ಹಂತಕ್ಕೆ ಬಂದ ಜೋಡಿ ಇದೀಗ ಈ ಶೋ ಕೊನೆಯ ಹಂತದಲ್ಲಿದೆ.
ಗಣೇಶ್ ಕಾರಂತ್ ಯೂಟ್ಯೂಬ್‌ನಲ್ಲಿ ಕಾಮಿಡಿ ವಿಡಿಯೋಗಳ ಮೂಲಕವೂ ಬಹಳ ಫೇಮಸ್ ಆಗಿದ್ದಾರೆ. ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಪ್ರವೃತ್ತಿಯಲ್ಲಿ ಹಿನ್ನೆಲೆ ಗಾಯಕರಾಗಿದ್ದಾರೆ. ಹಾಗೆಯೇ ಕಾಮಿಡಿ ವಿಡಿಯೋಗಳನ್ನು ಮಾಡುವುದರಲ್ಲಿ ಕೂಡಾ ಎತ್ತಿದ ಕೈ ಎಂದರೆ ತಪ್ಪಾಗದು. ಕ್ರಿಕೆಟ್, ಸಿನಿಮಾ ರಿವ್ಯೂ ಕೂಡಾ ಮಾಡ್ತಾರೆ. ಹಾಗೆಯೇ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಾ ಇದ್ದಾರೆ. ಗಣೇಶ್ ತಂದೆ ಕೆ. ಶಿವರಾಮ್ ಕಾರಂತ್ ನಿವೃತ್ತ ಬಿಎಸ್‌ಎನ್‌ಎಲ್ ಡಿಜಿಎಂ, ತಾಯಿ ಯಶೋಧಾ ಕಾರಂತ್ ಗೃಹಿಣಿ. ಓರ್ವ ಸಹೋದರಿಯೂ ಇದ್ದಾಳೆ. ಚಿಕ್ಕಂದಿನಿಂದ ಸಂಗೀತದ ಒಲವು 3 ವರ್ಷಗಳ ಹಿಂದೆ ಚಿಕ್ಕಬಳ್ಳಾಪುರದ ಶ್ರೀವಿದ್ಯಾ ಅವರನ್ನು ಗಣೇಶ್ ಕಾರಂತ್ ಕೈ ಹಿಡಿದಿದ್ದಾರೆ.
ಚಿಕ್ಕವಯಸ್ಸಿನಲ್ಲಿ ಉಡುಪಿಯಲ್ಲಿದ್ದಾಗ ಕರ್ನಾಟಕ ಸಂಗೀತ ಕಲಿತಿದ್ದಾರೆ. ಹಾಗಾಗಿ ಹಾಡುಗಾರಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಇದೀಗ ದಂಪತಿ ಕಾಮಿಡಿ ವಿಡಿಯೋಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದ್ದಾರೆ. ಅದೇ ಕಾರಣಕ್ಕೆ ಜೋಡಿ ನಂಬರ್ 1 ಶೋಗೆ ಎಂಟ್ರಿ ಕೊಡುವ ಅವಕಾಶ ಸಿಕ್ಕಿತ್ತು.
‘