ಗ್ಯಾಸ್ ಕೊಡುವ ನೆಪದಲ್ಲಿ ಡೆಲಿವರಿ ಬಾಯ್ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ

Views: 113
ಕನ್ನಡ ಕರಾವಳಿ ಸುದ್ದಿ: ಗ್ಯಾಸ್ ಡೆಲವರಿ ನೀಡಲು ಬಂದ ಡೆಲಿವರಿ ಬಾಯ್ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯಲ್ಲಿ ನಡೆದಿದೆ.
ಗ್ಯಾಸ್ ಏಜೆನ್ಸಿಯ ಡೆಲಿವರಿ ಬಾಯ್ ಮಹೇಶ್ ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪಿ.ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮೇ 21 ರಂದು ಪ್ರಕರಣ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಏನಿದು ದೂರು?
ಮಹಿಳೆ ಇದ್ದ ಮನೆಗೆ ಗ್ಯಾಸ್ ಡೆಲಿವರಿ ಬಾಯ್ ಮಹೇಶ್ ಬಂದು, ಬಾಗಿಲು ಬಡೆದಿದ್ದಾನೆ. ಮಹಿಳೆ ಯಾರು ಎಂದು ಕೇಳಿದಾಗ, ಗ್ಯಾಸ್ ಡೆಲಿವರಿ ಮಾಡುವನು ಅಂತ ಆರೋಪಿ ಮಹೇಶ್ ಹೇಳಿದ್ದಾನೆ. ನಾನು ಗ್ಯಾಸ್ ಬುಕ್ ಮಾಡಿಲ್ಲ” ಎಂದು ಮಹಿಳೆ ಹೇಳಿದ್ದಾರೆ. ಅದಕ್ಕೆ, ಆರೋಪಿ ಮಹೇಶ್ “ಬುಕ್ ಮಾಡದಿದ್ದರೂ ಕೊಡುತ್ತೇವೆ ಖಾಲಿ ಇದ್ದರೆ ತೆಗೆದುಕೊಳ್ಳಿ” ಎಂದು ಹೇಳಿದ್ದಾನೆ.
ಹಣವೆಷ್ಟು ಎಷ್ಟು ಎಂದು ಮಹಿಳೆ ಕೇಳಿದಾಗ 920 ರೂ. ಎಂದು ಹೇಳಿ ಹಣವನ್ನು ಪಡೆದುಕೊಂಡಿದ್ದಾನೆ. ತದನಂತರ, ಗ್ಯಾಸ್ ಕಂಪನಿ ಕಡೆಯಿಂದ ಕೆವೈಸಿ ಮಾಡಬೇಕು. ಹೀಗಾಗಿ, ಮನೆಯ ಫೋಟೊ ತೆಗೆಯಬೇಕು ಅದನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಬೇಕೆಂದು ಆರೋಪಿ ಮಹೇಶ್ ಹೇಳಿದ್ದಾನೆ. ನಂತರ, ಮಹಿಳೆಯನ್ನು ಮಹಿಳೆಯನ್ನು ಗ್ಯಾಸ್ ಸಿಲಿಂಡರ್ ಪಕ್ಕ ನಿಲ್ಲಿಸಿ ಫೋಟೊ ತೆಗೆದಿದ್ದಾನೆ.
ನಿಮ್ಮ, ಅಡುಗೆ ಮನೆಯಲ್ಲಿ ಗಾಳಿ, ಬೆಳಕು ಸರಿಯಾಗಿ ಬರುತ್ತದೆಯೋ, ಇಲ್ಲವೋ ಪರಿಶೀಲಿಸಬೇಕು. ಫೋಟೋ ತೆಗೆಯಬೇಕು ಎಂದು ಆರೋಪಿ ಮಹೇಶ್ ಹೇಳಿದ್ದಾನೆ. ಆರೋಪಿ ಮಹೇಶ್ ಮನೆಯೊಳಗೆ ಬಂದ ಕೂಡಲೆ, ಮಹಿಳೆಯನ್ನು ತಳ್ಳಿದ್ದಾನೆ. ಚಾಕು ತೋರಿಸಿ ಕಿರುಚಿದರೆ ನಿನ್ನನ್ನು ಇಲ್ಲೇ ಮುಗಿಸಿಬಿಡುತ್ತೇನೆ ಅಂತ ಆರೋಪಿ ಮಹೇಶ್ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ದಾಖಲಾಗಿದೆ.
ಬಳಿಕ ಮಹಿಳೆ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿದನು.ಎಂದು ಮಹಿಳೆ ನೀಡಿದ ದೂರಿನಲ್ಲಿ ಇದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.