ಇತರೆ
ಗಂಡನ ಹಿಂಸೆಯಿಂದ ಮಗಳ ಅನುಮಾನಾಸ್ಪದ ಸಾವು: ಕುಟುಂಬಸ್ಥರಿಂದ ಎಸ್ಪಿ ಕಚೇರಿ ಮುಂದೆ ನ್ಯಾಯಕ್ಕಾಗಿ ಕಣ್ಣೀರು

Views: 0
ಕಡೂರು :ಅನುಮಾನಾಸ್ಪದ ಸಾವನಪ್ಪಿದ ಮಗಳ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ಮಂಡ್ಯದಿಂದ ಬಂದ ರುಕ್ಮಿಣಿ ಕುಟುಂಬಸ್ಥರು ಎಸ್ ಪಿ ಕಚೇರಿ ಮುಂದೆ ಗೋಳಾಡಿದ ಘಟನೆ ನಡೆದಿದೆ.
ಮೃತಪಟ್ಪ ರುಕ್ಮಿಣಿ (31) ಕಳೆದ 14 ವರ್ಷಗಳ ಹಿಂದೆ ಕಡೂರಿನ ಕಣ್ಣನ್ ನಿಗೆ ಮದುವೆ ಮಾಡಿಕೊಡಲಾಗಿತ್ತು,. ಮದುವೆಯಾಗಿಂದ ಅತ್ತೆ ಮಾವ ಗಂಡನಿಂದ ಕಿರುಕುಳ ನೀಡಿದ ಆರೋಪದಲ್ಲಿ ರುಕ್ಮಿಣಿ ಸಾವನಪ್ಪಿದ್ದಾರೆ.
ಗಂಡನೇ ಹೆಂಡತಿಯನ್ನು ಕೊಲೆ ಮಾಡಿದ್ದು, ಆದರೆ ಪೊಲೀಸರು ಆತ್ಮಹತ್ಯೆ ಎಂದು ಮರೆಮಾಚಲು ಯತ್ನಿಸುತ್ತಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ರುಕ್ಮಿಣಿ ಸಾವಿನ ನಂತರ ಇಬ್ಬರು ಮಕ್ಕಳು ಕಣ್ಮರೆಯಾಗಿದ್ದರು ಮಕ್ಕಳನ್ನು ಹುಡುಕಿ ಕೊಡುವಂತೆ ನ್ಯಾಯಕ್ಕಾಗಿ ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ರುಕ್ಮಿಣಿ ಸಾವಿನ ನಂತರ ಹಲ್ಲೆ ಮಾಡಿರುವುದಾಗಿ ಒಪ್ಪಿಕೊಂಡಿರುವ ಕಣ್ಣನ್ ಆಡಿಯೋ ಲಭ್ಯವಾಗಿದ್ದು, ನಮಗೆ ನ್ಯಾಯ ಒದಗಿಸಿಕೊಡುವಂತೆ ಅಂಗಲಾಚುತ್ತಿದ್ದಾರೆ.