ಕೇಜ್ರಿವಾಲ್ ಸೋಲಿಸಿದ ಪರ್ವೇಶ್ ವರ್ಮಾ ದೆಹಲಿಯ ನೂತನ ಸಿಎಂ?.. ಇನ್ನೂ ಮೂರು ಜನ ಸಿಎಂ ಆಕಾಂಕ್ಷಿಗಳು ಯಾರು?

Views: 164
ಕನ್ನಡ ಕರಾವಳಿ ಸುದ್ದಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ನಿಶ್ಚಿತವಾಗಿದೆ. ಈಗಾಗಲೇ 47 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ ಸಾಧಿಸಿರುವ ಬಿಜೆಪಿ 10 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿದೆ. ಇದರ ಮಧ್ಯೆಯೇ ಈಗ ಬಿಜೆಪಿಯ ಮುಂದಿನ ಸಿಎಂ ಯಾರು ಎಂಬ ಬಗ್ಗೆ ಚರ್ಚೆ ಜೋರಾಗಿದೆ.
ನವದೆಹಲಿ ಕ್ಷೇತ್ರದಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ ಪರ್ವೇಶ್ ವರ್ಮಾ ಅವರೇ ದೆಹಲಿಯ ನೂತನ ಸಿಎಂ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಅದರಂತೆಯೇ ಈಗ ಪರ್ವೇಶ್ ವರ್ಮಾ ಅಮಿತ್ ಶಾ ಅವರನ್ನು ಭೇಟಿಯಾಗಲು ಅವರ ನಿವಾಸಕ್ಕೆ ತೆರಳಿದ್ದಾರೆ. ಆದ್ರೆ ಪರ್ವೇಶ್ ಬಳಿಕವೂ ದೆಹಲಿಯ ಸಿಎಂ ಗದ್ದುಗೆ ಏರುವ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ.
ಕಲ್ಕಾಜಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಮೇಶ್ ಬಿಧುರಿ ಕೂಡ ಸಿಎಂ ಆಕಾಂಕ್ಷಿಯಾಗಿದ್ದರು ಆದ್ರೆ ಅವರು ಈಗ ಸರಿಸುಮಾರು ಒಂದು ಸಾವಿರ ಮತಗಳಿಂದ ಅತಿಶಿ ವಿರುದ್ಧ ಸೋತಿದ್ದರಿಂದ ಅವರು ಸಿಎಂ ಆಗುವ ಹಾದಿ ಮುಚ್ಚಿ ಹೋಗಿದೆ. ಹೀಗಾಗಿ ಪರ್ವೇಶ್ ವರ್ಮಾ ಅವರ ಹಾದಿ ಸುಗಮವಾಗಿದೆ ಎಂದು ಹೇಳಲಾಗುತ್ತಿದೆ ಆದ್ರೆ ಸಿಎಂ ರೇಸ್ನಲ್ಲಿ ಇವರ ಹೊರತಾಗಿ ಇನ್ನು ಅನೇಕ ಜನರ ಹೆಸರುಗಳು ಕೇಳಿ ಬರುತ್ತಿವೆ.
ಸಿಎಂ ರೇಸ್ನಲ್ಲಿ ಕೇಳಿ ಬರುತ್ತಿರುವ ಮತ್ತೊಂದು ಹೆಸರು ಅಂದ್ರೆ ಅದು ಸುಷ್ಮಾ ಸ್ವರಾಜ್ ಅವರ ಮಗಳು ಬನ್ಸುರಿ ಸ್ವರಾಜ್, ನವದೆಹಲಿಯಿಂದ ಮೊದಲ ಬಾರಿಗೆ ಎಂಪಿ ಆಗಿ ಲೋಕಸಭೆ ಪ್ರವೇಶಿಸಿರುವ ಬನ್ಸುರಿ ಸ್ವರಾಜ್ ಪಕ್ಷದೊಂದಿಗೆ ಅತ್ಯಾಪ್ತರಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಇವರ ಹೆಸರು ಕೂಡ ಸಿಎಂ ರೇಸ್ನಲ್ಲಿ ಕೇಳಿ ಬರುತ್ತಿದೆ.
ಇನ್ನು ಬನ್ಸುರಿ ಸ್ವರಾಜ್ ಹೆಸರಿನ ಜೊತೆಗೆ ಕೇಳಿ ಬರುತ್ತಿರುವ ಮತ್ತೊಂದು ಅಚ್ಚರಿಯ ಹೆಸರು ಅಂದ್ರೆ ಅದು ಸ್ಮೃತಿ ಇರಾನಿ. 2024ರ ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಸ್ಮೃತಿ ಇರಾನಿಯವರನ್ನು ದೆಹಲಿ ಗದ್ದುಗೆಗೆ ತಂದು ಕೂರಿಸುವ ಪ್ಲ್ಯಾನ್ ಹಿಂದಿನಿಂದಲೂ ಬಿಜೆಪಿಯಲ್ಲಿ ನಡೆದಿದೆ.
ಸಾಲು ಸಾಲು ಹಗರಣಗಳೇ ಸೋಲಿಗೆ ಕಾರಣ: ಅಣ್ಣಾ ಹಜಾರೆ ಕಿಡಿ
ಇತ್ತ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಕೂಡ ಹಗರಣಗಳೇ ಆಪ್ ಕೊಚ್ಚಿ ಹೋಗುವಂತೆ ಮಾಡಿದೆ ಎಂದು ಗುಡುಗಿದ್ದಾರೆ. ಕಾರಣವಾಗಿದೆ. ಆಮ್ ಆದ್ಮಿ ಪಕ್ಷ ದೆಹಲಿ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದೆ.
ಅರವಿಂದ ಕೇಜ್ರಿವಾಲ್ ಅವರ ಹ್ಯಾಟ್ರಿಕ್ ಗೆಲುವಿನ ಕನಸು ಭಗ್ನಗೊಂಡಿದೆ. ಸ್ವತಃ ಕೇಜ್ರಿವಾಲ್ ತಮ್ಮ ತವರು ಕ್ಷೇತ್ರದಲ್ಲಿಯೇ ಮಕಾಡೆ ಮಲಗಿದ್ದಾರೆ. ಬಿಜೆಪಿಯ ಪರ್ವೇಶ್ ವರ್ಮಾ ಕೇಜ್ರಿವಾಲ್ ವಿರುದ್ಧ ಗೆದ್ದು ಬೀಗಿದ್ದಾರೆ. ಆಮ್ ಆದ್ಮಿ ಪಕ್ಷದ ಸಾಲು ಸಾಲು ಹಗರಣಗಳೇ ಸೋಲಿಗೆ ಕಾರಣವಾಗಿದೆ. ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದ ಆಪ್‌ಗೆ ಮತದಾರರು ಸೋಲಿನ ರುಚಿ ತೋರಿಸಿದ್ದಾರೆ.