ಕರಾವಳಿ

ಕುಂದಾಪುರ: ವಿಪರೀತ ತಲೆನೋವಿನಿಂದ ಕಾಳಾವರದ ಮಹಿಳೆ ಸಾವು

Views: 731

ಕುಂದಾಪುರ: ವಿಪರೀತ ತಲೆನೋವಿನಿಂದ ಬಳಲುತ್ತಿದ್ದ, ಕಾಳಾವರ ಸಳ್ವಾಡಿಯ ಸುರೇಶ್ ಶೆಟ್ಟಿಗಾರ್ ಅವರ ಪತ್ನಿ ನಾಗರತ್ನಾ (40) ಅವರು ಸಾವನ್ನಪ್ಪಿದ ಘಟನೆ ಅ. 19ರ ತಡರಾತ್ರಿ 3 ಗಂಟೆ ಸುಮಾರಿಗೆ ಸಂಭವಿಸಿದೆ.

ರಾತ್ರಿ 8 ಗಂಟೆ ಸುಮಾರಿಗೆ ಮನೆಯಲ್ಲಿ ವಾಂತಿ ಮಾಡಿಕೊಂಡಿದ್ದು, ರಾತ್ರಿ 12.30ರ ವೇಳೆಗೆ ತಲೆನೋವು ಉಲ್ಬಣಗೊಂಡಿದ್ದು, ಕೂಡಲೇ ಅವರನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.ನಂತರ ಕುಂದಾಪುರ ಸರ್ಕಾರಿ  ದಾಖಲಿಸಲಾಗಿದೆ‌. ಚಿಕಿತ್ಸೆಗೆ ಸ್ಪಂದಿಸದೆ 3 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಪತಿ ಕ್ಯಾನ್ಸರ್ ಬಳಸುತ್ತಿದ್ದು, ಇವರಿಗೆ ಮಕ್ಕಳಾಗಿರಲಿಲ್ಲ.ಕಂಡ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button