ಇತರೆ

ಉತ್ತರ ಕನ್ನಡದ ಮುಂಡಗೋಡಿನಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ: ಬಾಲಕಿ ಗಂಡು ಮಗುವಿಗೆ ಜನ್ಮ,ಅರೋಪಿಯ ಮನೆ ದ್ವಂಸ 

Views: 70

ಕನ್ನಡ ಕರಾವಳಿ ಸುದ್ದಿ:ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ 12 ವರ್ಷದ ಬಾಲಕಿಗೆ ಇಸ್ಮಾಯಲ್ ಹೂಲಗೂರ (65) ಎಂಬಾತ ದೌರ್ಜನ್ಯ ನಡೆಸಿ ಗರ್ಭಿಣಿ ಮಾಡಿದ್ದನು. ಮನೆಯಲ್ಲಿ ಆಕೆ ದೌರ್ಜನ್ಯಕ್ಕೊಳಗಾಗಿರುವು ಗೊತ್ತಾಗಿದ್ದೇ ಆಕೆ ಒಂಬತ್ತು ತಿಂಗಳ ತುಂಬು ಗರ್ಭಿಣಿಯಾದಾಗ. ಇದೀಗ ಈ ಪುಟ್ಟ ಬಾಲಕಿ ಮಂಡಗೋಡಿನ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ಮಗು ಮತ್ತು ತಾಯಿ ಆರೋಗ್ಯವಾಗಿದ್ದು ಮಗುವನ್ನು ಶಿರಸಿಯ ದತ್ತು ಸ್ವೀಕಾರ ಕೇಂದ್ರಕ್ಕೆ ಹಸ್ತಾಂತರಿಸಲಾಗುತ್ತಿದೆ.ಈ ಮೂಲಕ ಮಗುವಿನ ಆರೈಕೆಯ ಹೊಣೆಯನ್ನು ಶಿರಸಿಯ ದತ್ತು ಸ್ವೀಕಾರ ಕೇಂದ್ರ ಹೊರಲಿದೆ.

ದೌರ್ಜನ್ಯವೆಸಗಿದವನ ವಿರುದ್ಧ ಮುಗಿಲುಮುಟ್ಟಿದ ಆಕ್ರೋಶ: ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಖಂಡಿಸಿ ಮುಂಡಗೋಡಿನಲ್ಲಿ ನಡೆದ ಬಂದ್ ಮತ್ತು ಪ್ರತಿಭಟನಾ ಮೆರವಣಿಗೆ.ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಖಂಡಿಸಿ ಮುಂಡಗೋಡಿನಲ್ಲಿ ನಡೆದ ಬಂದ್ ಮತ್ತು ಪ್ರತಿಭಟನಾ ಮೆರವಣಿಗೆ. ನೀಚ ಇಸ್ಮಾಯಲ್ ಹೂಲಗೂರನ ಈ ಕೆಟ್ಟ ಕ್ರೌರ್ಯಕ್ಕೆ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗಿದೆ.ಶೀಘ್ರ ತನಿಖೆ ನಡೆಸಿ ,ಆತನಿಗೆ ಮರಣದಂಡನೆ ನೀಡಬೇಕು ಎಂಬ ಒತ್ತಾಯ ಹಿಂದೂಪರ ಸಂಘಟನೆ ಇಡೀ ಮುಂಡಗೋಡನ್ನ ಬಂದ್ ಮಾಡಿ ಆಗ್ರಹಿಸಿದರೆ. ವಿವಿಧ ಮುಸ್ಲಿಂ ಸಂಘಟನೆಗಳು ಸಹ ಈತನಿಗೆ ಉಗ್ರ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿವೆ.ಅಪ್ರಾಪ್ತ ಬಾಲಕಿ ಅತ್ಯಾಚಾರ ಮಾಡಿದ ಅರೋಪಿಯ ಮನೆಯನ್ನು ಉದ್ರಿಕ್ತಗೊಂಡ ಜನ ಧ್ವಂಸಮಾಡಿದ ಘಟನೆ ನಡೆದಿದೆ.

ಸಧ್ಯ ಈ ಪ್ರಕರಣ ತನಿಖೆಯ ಅಂತಿಮ ಹಂತಕ್ಕೆ ತಲುಪುತಿದ್ದು ದೋಷಾರೋಪಣಾ ಪಟ್ಟಿಯನ್ನ ನ್ಯಾಯಾಲಯಕ್ಕೆ ಸಲ್ಲಿಕೆಯಾಗಲಿದೆ.

 

Related Articles

Back to top button
error: Content is protected !!