ಕ್ರೀಡೆ

ಕೊಲ್ಲೂರು ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿಪೂರ್ವ ಕಾಲೇಜು: ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ದ್ವಿತೀಯ 

Views: 43

ಕನ್ನಡ ಕರಾವಳಿ ಸುದ್ದಿ: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ ಹಾಗೂ ಭುವನೇಂದ್ರ ಪದವಿ ಪೂರ್ವ ಕಾಲೇಜು ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪದವಿಪೂರ್ವ ವಿಭಾಗದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿಪೂರ್ವ ಕಾಲೇಜಿನ ಬಾಲಕ ,ಬಾಲಕಿಯರ ತಂಡವು ದ್ವಿತೀಯ ಸ್ಥಾನ ಪಡೆದಿರುತ್ತಾರೆ,

ದ್ವಿತೀಯ ವಾಣಿಜ್ಯ ವಿಭಾಗದ ಜೀವನ ಖಾರ್ವಿ – ಬೆಸ್ಟ್ ಆಲ್ ರೌಂಡರ್ ,

ದ್ವಿತೀಯ ವಾಣಿಜ್ಯ ವಿಭಾಗದ ಸುಕನ್ಯ ಬೆಸ್ಟ್ ಡಿಫೆಂಡರ್ ,

ದ್ವಿತೀಯ ಕಲಾ ವಿಭಾಗದ ವರ್ಷ ಸವ್ಯಸಾಚಿ ಅವಾರ್ಡ್ ಪಡೆದುಕೊಂಡಿರುತ್ತಾರೆ

ಈ ಕೆಳಗಿನ ವಿದ್ಯಾರ್ಥಿಗಳು ವಿಜಯಪುರದಲ್ಲಿ ನಡೆಯುವ ರಾಜ್ಯ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.

1, ಜೀವನ ದ್ವಿತೀಯ ವಾಣಿಜ್ಯ ವಿಭಾಗ

2, ಸಂಪ್ರೀತ್ ಜಿ ಎಸ್ ದ್ವಿತೀಯ ವಾಣಿಜ್ಯ ವಿಭಾಗ

3, ಶ್ರೀವತ್ಸ ಜಿ ಎಸ್ ಪ್ರಥಮ ವಾಣಿಜ್ಯ ವಿಭಾಗ

4,ಸುಕನ್ಯ ಗೌಡ ದ್ವಿತೀಯ ವಾಣಿಜ್ಯ ವಿಭಾಗ

5,,ಗೌರಿ ಸಿ ದ್ವಿತೀಯ ವಾಣಿಜ್ಯ ವಿಭಾಗ

6, ವರ್ಷ ಆರ್ ದ್ವಿತೀಯ ಕಲಾ ವಿಭಾಗ

ತಂಡದೊಂದಿಗೆ ದೈಹಿಕ ಶಿಕ್ಷಣ ಉಪನ್ಯಾಸಕ ಸುಕೇಶ ಶೆಟ್ಟಿ ಹೊಸಮಠ , ಸಮಾಜಶಾಸ್ತ್ರ ಉಪನ್ಯಾಸಕ ನಾಗರಾಜ ಅಡಿಗ ಉಪಸ್ಥಿತರಿದ್ದರು.

ವಿಜೇತ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದನೆ ಹಾಗೂ ಶುಭ ಕೋರಿರುತ್ತಾರೆ

Related Articles

Back to top button
error: Content is protected !!