ಇತರೆ

‘ರೀಲ್ಸ್ ನೋಡಬೇಡ ಓದಿನ ಕಡೆಗೆ ಗಮನ ಕೊಡು’ ಬುದ್ಧಿವಾದ ಹೇಳಿದ ತಾಯಿ: ಆತ್ಮಹತ್ಯೆಗೆ ಶರಣಾದ ಮಗಳು!

Views: 32

ಕನ್ನಡ ಕರಾವಳಿ ಸುದ್ದಿ:ಧಾರವಾಡ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ಒಂದು ದುರಂತ ಘಟನೆ ಬೆಳಕಿಗೆ ಬಂದಿದೆ. 20 ವರ್ಷದ ಯುವತಿ ಮೇಘಾ ಗುಬ್ಬನ್ನವರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ದಿನವಿಡೀ ರೀಲ್ಸ್‌, ಸೋಷಿಯಲ್‌ ಮೀಡಿಯಾ, ಗೇಮ್ಸ್‌ ಆಡಿಕೊಂಡೇ ಇರುತ್ತಿದ್ದ ಯುವತಿಗೆ ತಾಯಿ ಬುದ್ಧಿವಾದ ಹೇಳಿದ್ದರು, ಮೊಬೈಲ್‌ನಲ್ಲಿ ರೀಲ್ಸ್ ನೋಡುವುದನ್ನು ನಿಲ್ಲಿಸುವಂತೆ ತಾಯಿ ಹೇಳಿದ್ದಕ್ಕೆ ಮನನೊಂದು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೇಘಾ ಎಂಬ ಯುವತಿ ಧಾರವಾಡದ ಖಾಸಗಿ ಕಾಲೇಜಿನಲ್ಲಿ ಡಿ.ಎಡ್. ವ್ಯಾಸಂಗ ಮಾಡುತ್ತಿದ್ದರು. ಕಾಲೇಜಿಗೆ ಹೋಗಲು ಅನುಕೂಲವಾಗಲಿ ಎಂದು ಪೋಷಕರು ಅವರಿಗೆ ಹೊಸ ಮೊಬೈಲ್ ಖರೀದಿಸಿ ಕೊಟ್ಟಿದ್ದರು ಎನ್ನಲಾಗಿದೆ. ಆದರೆ ಮೇಘಾ ದಿನವಿಡೀ ಮೊಬೈಲ್‌ನಲ್ಲಿ ರೀಲ್ಸ್ ನೋಡುವುದರಲ್ಲಿ, ಗೇಮ್ಸ್‌ ಆಡುವುದರಲ್ಲೇ ಮಗ್ನರಾಗಿದ್ದರು. ಶಿಕ್ಷಣದ ಕಡೆ ಕಡಿಮೆ ಗಮನ ಹರಿಸುತ್ತಿದ್ದ ಮೇಘಾಳನ್ನು ನೋಡಿ ಪೋಷಕರು ಆತಂಕಪಟ್ಟಿದ್ದರು.

ಅದೇ ಕಾರಣದಿಂದ ತಾಯಿ, ಮೇಘಾ ಬಳಿ ರೀಲ್ಸ್ ನೋಡಬೇಡ, ಓದಿಗೆ ಗಮನ ಕೊಡು ಎಂದು ಬೈದು ಬುದ್ಧಿವಾದ ಹೇಳಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ಮೇಘಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಹೇಳಲಾಗಿದೆ. ಏಕೈಕ ಮಗಳಾಗಿದ್ದ ಮೇಘಾಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

Related Articles

Back to top button
error: Content is protected !!