ಇತರೆ
ಬ್ರಹ್ಮಾವರ ಫಾರ್ಚೂನ್ ಕಾಲೇಜ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್: ರಕ್ತದಾನ ಶಿಬಿರ ಉದ್ಘಾಟನೆ
Views: 0
ಕನ್ನಡ ಕರಾವಳಿ ಸುದ್ದಿ: ಬ್ರಹ್ಮಾವರ ಫಾರ್ಚೂನ್ ಕಾಲೇಜ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್ ಇವರ ನೇತೃತ್ವದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಭಾರತೀಯ ರೆಡ್ ಕ್ರಾಸ್ ಸೊಸೈಟಿ ರಕ್ತದಾನ ಕೇಂದ್ರ, ಕುಂದಾಪುರ, ಲಯನ್ಸ್ ಕ್ಲಬ್ ಬೃಹ್ಮಗಿರಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಮೂಡಹಡು, ಪಾಂಡೇಶ್ವರ, ಸಾಮ್ರಾಜ್ಜಿ ಆಟೋ ಚಾಲಕರ ಸಂಘ ಮಾಬುಕಳ ಇವರ ಸಂಯುಕ್ತ ಆಶಯದಲ್ಲಿ ಅಗಸ್ಟ್ 12ರಂದು ಬುಧವಾರ ಕಾಲೇಜಿನ ಅಡಿಟೋರಿಯಂನಲ್ಲಿ ದೀಪ ಪ್ರಜ್ಜಲಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಭಾರತೀಯ ರೆಡ್ ಕ್ರಾಸ್ ಸೊಸೈಟಿ ರಕ್ತ ಕೇಂದ್ರ ಕುಂದಾಪುರ ಶ್ರೀ ಎಸ್.ಜಯಕರ ಶೆಟ್ಟಿ, ಅಧ್ಯಕ್ಷರು ಭಾರತೀಯ ರೆಡ್ ಕ್ರಾಸ್ ಸೊಸೈಟಿ ರಕ್ತ ಕೇಂದ್ರ, ಕುಂದಾಪುರ ಇವರು ಮಾತನಾಡಿ, ರಕ್ತದಾನಕ್ಕಿಂತ ಶ್ರೇಷ್ಠದಾನ ಇನ್ನೊಂದಿಲ್ಲ ಇನ್ನೊಬ್ಬರ ಜೀವ ಉಳಿಸುವ ಸಲುವಾಗಿ ತನ್ನ ರಕ್ತವನ್ನು ಸ್ವಯಂ ಪ್ರೇರಣೆಯಿಂದ ಯಾವುದೇ ಪ್ರತಿಫಲಪೇಕ್ಷೆ ಇಲ್ಲದೆ ಇದೊಂದು ಪವಿತ್ರ ದಾನವಾಗಿದೆ, ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ಮತ್ತೊಬ್ಬ ವ್ಯಕ್ತಿಯ ಜೀವ ಉಳಿಸಿದಂತಾಗುತ್ತದೆ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ ಈ ಕಾರಣಕ್ಕೆ ರಕ್ತವನ್ನು ಪರ್ಯಾಯವಾದ ವಸ್ತು ಇನ್ನೊಂದು ಇಲ್ಲ ಎಂದರು.
ಮುಖ್ಯ ಅತಿಥಿ ಶ್ರೀ ದಿನೇಶ್ ಬಾಂಧವ್ಯ ಸಂಸ್ಥಾಪಕರು, ಬಾಂಧವ್ಯ ಫೌಂಡೇಶನ್ ಮತ್ತು ಸಾಲುಮರದ ತಿಮ್ಮಕ್ಕ ರಾಷ್ಟ್ರೀಯ ಹಸಿರು ಪ್ರಶಸ್ತಿ ಪುರಸ್ಕೃತರಾದ ಅವರು ಮಾತನಾಡಿ, ನಾನು 45 ಬಾರಿ ರಕ್ತದಾನ ಮಾಡಿದ್ದೇನೆ. ನಾವೆಲ್ಲರೂ ಜಾತಿ, ಮತ, ಧರ್ಮ, ಲಿಂಗ ಭೇದವನ್ನು ಬದಿಗಿಟ್ಟು ರಕ್ತದಾನ ಮಾಡಿ ಜೀವದಾನ ಮಾಡೋಣ ಎಂದರು.
ಡಾ. ತಾರಾನಾಥ ಶೆಟ್ಟಿ, ಅಧ್ಯಕ್ಷರು ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ಸಭೆಯ ಅಧ್ಯಕ್ಷತೆ ವಹಿಸಿ ರಕ್ತದಾನದ ಶ್ರೇಷ್ಠದಾನಕ್ಕೆ ನಾವೆಲ್ಲರೂ ಕೈಜೋಡಿಸೋಣ ಎಂದು ಅತಿಥಿಗಳನ್ನು ಗೌರವಿಸಿದರು.
ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಹರೀಶ್,ಪ್ರೋ. ಸ್ಮಿತಾ ಮೋಲ್ ಇಎಮ್. ಪ್ರಾಂಶುಪಾಲರು ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ಬ್ರಹ್ಮಾವರ, ಶ್ರೀ ವೆಂಕಟೇಶ ಪೂಜಾರಿ, ಅಧ್ಯಕ್ಷರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮೂಡಹಡು, ಪಾಂಡೇಶ್ವರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಲಯನ್ಸ್ ಉಮೇಶ್ ನಾಯಕ್, ಟ್ರಸ್ಟಿ ಸುಜಾತ ಟಿ ಶೆಟ್ಟಿ, ಶ್ರೀಮತಿ ವಿಜೇತ ಹರಿಪ್ರಸಾದ್ ರೈ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಕಲ್ಪನಾ ಶೆಟ್ಟಿ, ಮತ್ತು ವಿವಿಧ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಲಯನ್ಸ್ ಕಾರ್ಯದರ್ಶಿ ಶ್ರೀಮತಿ ಶೈನ್ ಸತ್ಯಭಾಮ ರಕ್ತದಾನದ ಬಗ್ಗೆ ಮಾಹಿತಿ ನೀಡಿದರು.
ಸಹಾಯಕ ಉಪನ್ಯಾಸಕಿ ಚೈತ್ರ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಕೀರ್ತನ ಮತ್ತು ತಂಡದವರಿಂದ ಪ್ರಾರ್ಥನೆ ನಡೆಯಿತು. ಸಹಾಯಕ ಉಪನ್ಯಾಸಕಿ ಪ್ರೀತಿಕಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ನಿತ್ಯ ವಂದಿಸಿದರು.














