ಇತರೆ

ಕೋಟೇಶ್ವರ ಅಂಡರ್‌ಪಾಸ್‌ನಲ್ಲಿ ಗೂಡ್ಸ್ ಲಾರಿ – ಬೈಕ್ ಢಿಕ್ಕಿ: ಸವಾರ ಸಾವು

Views: 386

ಕನ್ನಡ ಕರಾವಳಿ ಸುದ್ದಿ: ಬೈಕ್ ಮತ್ತು ಗೂಡ್ಸ್ ಲಾರಿ ಪರಸ್ಪರ ಢಿಕ್ಕಿಯಾಗಿ, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸೋಮವಾರ ಸಂಜೆ ರಾಷ್ಟ್ರೀಯ ಹೆದ್ದಾರಿ 66ರ ಕೋಟೇಶ್ವರದ ಅಂಡರ್ ಪಾಸ್‌ನಲ್ಲಿ ಸಂಭವಿಸಿದೆ.

ಬೈಕ್ ಸವಾರ ಕೋಟೇಶ್ವರದ ಮಾರ್ಕೋಡಿನ ಪ್ರದೀಪ್ ಪೂಜಾರಿ (35) ಸಾವನ್ನಪ್ಪಿದವರು.ಇವರು ಗಾರೆ ಮೇಸ್ತ್ರಿ ಕೆಲಸ ಮಾಡುತ್ತಿದ್ದರು. ಅವಿವಾಹಿತರಾಗಿದ್ದರು ಎಂದು ತಿಳಿದುಬಂದಿದೆ.

ಹಾಲಾಡಿ ರಸ್ತೆಯಿಂದ ಕೋಟೇಶ್ವರ ಪೇಟೆಯ ಕಡೆಗೆ ಬೈಕ್‌ನಲ್ಲಿ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.ಉಡುಪಿ ಕಡೆಯಿಂದ ಬಂದ 10 ಚಕ್ರದ ಗೂಡ್ಸ್ ಲಾರಿಯು ಅಂಡರ್ ಪಾಸ್‌ನೊಳಗೆ ಬಂದಿದ್ದು, ಈ ವೇಳೆ ಅಪಘಾತ ಸಂಭವಿಸಿದೆ.ಡಿಕ್ಕಿಯ ತೀವ್ರತೆಗೆ ಬೈಕ್ ಸವಾರ ಪ್ರದೀಪ್ ಪೂಜಾರಿ ಲಾರಿಯ ಅಡಿಗೆ ಸಿಲುಕಿದ್ದು, ಗಂಭೀರ ಗಾಯಗಳೊಂದಿಗೆ ತೀವ್ರ ರಕ್ತಸ್ರಾವಕ್ಕೊಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಕ್ಷಣ ಸಾರ್ವಜನಿಕರು ನೆರವಿಗೆ ಧಾವಿಸಿದರೂ ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ.

10 ಚಕ್ರದ ವಾಹನಗಳು ಈ ಅಂಡರ್‌ಪಾಸ್‌ನಲ್ಲಿ ಸಂಚರಿಸುವುದನ್ನು ನಿರ್ಬಂಧಿಸಬೇಕು ಹಾಗೂ ಪೊಲೀಸರು ಇಲ್ಲಿ ಸುರಕ್ಷಾ ಸಂಚಾರ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕುಂದಾಪುರ ಸಂಚಾರ ಠಾಣೆ ಎಸ್. ಐ. ಅನೂಪ್ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Related Articles

Back to top button
error: Content is protected !!