ಇತರೆ

ಜಗತ್ತಿನ ಪುರಾತನ ಸಮರ ಕಲೆಗಳಲ್ಲಿ ಒಂದಾದ ‘ತುಳುನಾಡ ಕಳರಿ’ಗೆ ಪುನಶ್ವೇತನ–ಮಾಹಿತಿ ಕಾರ್ಯಾಗಾರ

"ತುಳುನಾಡ ಕಳರಿ ಮತ್ತೆ ಪ್ರವರ್ಧಮಾನಕ್ಕೆ ಬಂದು ವಿಸ್ತ್ರತ ವ್ಯಾಪ್ತಿಯ ಪ್ರಚಾರ ಪಡೆಯಬೇಕು"---ಡಾ.ಹಾಸನ ರಘು

Views: 72

ಕನ್ನಡ ಕರಾವಳಿ ಸುದ್ದಿ: ಜಗತ್ತಿನ ಪುರಾತನ ಸಮರ ಕಲೆಗಳಲ್ಲಿ ಒಂದಾದ ‘ತುಳುನಾಡ ಕಳರಿ’ಗೆ ಪುನಶ್ವೇತನ ನೀಡುವ ಆಶಯದೊಂದಿಗೆ ತುಳುವರ್ಲ್ಡ್ ಫೌಂಡೇಶನ್, ತುಳುವೆರೆ ಆಯನ ಕೂಟ ಕುಡ್ಲ ಸಂಯೋಗದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪದವಿ ಕಾಲೇಜಿನಲ್ಲಿ ಮಾಹಿತಿ ಕಾರ್ಯಾಗಾರ ಶನಿವಾರ ನಡೆಯಿತು.

ಬಹುಭಾಷಾ ಸಿನೆಮಾಗಳ ನಿರ್ದೇಶಕ ಪದ್ಮಶ್ರೀ ಡಾ.ಹಾಸನ ರಘು ಕಾರ್ಯಾಗಾರ ಉದ್ಘಾಟಿಸಿ, ತುಳುನಾಡ ಕಳರಿ ಮತ್ತೆ ಪ್ರವರ್ಧಮಾನಕ್ಕೆ ಬಂದು ವಿಸ್ತ್ರತ ವ್ಯಾಪ್ತಿಯ ಪ್ರಚಾರ ಪಡೆಯಬೇಕು ಎಂದರು.

ತುಳುವರ್ಲ್ಡ್ ಫೌಂಡೇಶನ್ ಹಾಗೂ ಜನಪದ ಪರಿಷತ್‌ ವತಿಯಿಂದ ಪದ್ಮಶ್ರೀ ಡಾ.ಹಾಸನ ರಘು ಅವರನ್ನು ಸನ್ಮಾನಿಸ ಲಾಯಿತು. ಜನಪದ ಪರಿಷತ್ ಕಾರ್ಯ ದರ್ಶಿ ರಾಜೇಶ್ ಎಸ್. ಅಭಿನಂದಿಸಿದರು. ಕಟೀಲು ಕಾಲೇಜಿನ ಪ್ರಿನ್ಸಿಪಾಲ್ ಡಾ. ವಿಜಯ್ ಅಧ್ಯಕ್ಷತೆ ವಹಿಸಿದ್ದರು. ಯೋಧಕಲೆ ಸಂಶೋಧಕ ಡಾ.ಸತೀಶ್ ಸಿ.ಪಿ., ತುಳುನಾಡ ಕಳರಿತಜ್ಞ ಮಹಿತನ್ ವಡಗರ, ಕಳರಿ ಡಿಕ್ಷನರಿ ಹಾಗೂ ರಾಮಾಯಣದಲ್ಲಿ ಯೋಧಕಲೆ ಬಗ್ಗೆ ಕೃತಿರಚನೆಕಾರ ಡಾ.ಸಿ.ಗಂಗಾಧರನ್, ಡಾ.ಧನ್ಯ ಮಹೇಶ್, ಸಂಶೋಧಕ ಉಮೇಶ್ ಗೌಡ ವಿಚಾರ ಮಂಡನೆ ಮಾಡಿದರು. ತುಳುವರ್ಲ್ಡ್ ಫೌಂಡೇಶನ್ ನಿರ್ದೇ ಶಕ ಡಾ.ರಾಜೇಶ್ ಆಳ್ವ ಸ್ವಾಗತಿಸಿ, ಪ್ರಮೋದ್ ಸಪ್ಪೆ ವಂದಿಸಿದರು. ಸದಾನಂದ ನಾರಾರಿ ಕಾರ್ಯಕ್ರಮ ನಿರೂಪಿಸಿದರು.

Related Articles

Back to top button