ಇತರೆ

ವಾರಾಹಿ ಕುಡಿಯುವ ನೀರಿನ ಶುದ್ದೀಕರಣ ಘಟಕ: ವಿದ್ಯುತ್ ಆಘಾತದಿಂದ ಸಾವು 

Views: 95

ಕನ್ನಡ ಕರಾವಳಿ ಸುದ್ದಿ:ವಾರಾಹಿ ಕುಡಿಯುವ ನೀರಿನ ಶುದ್ದೀಕರಣ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕ ವಿದ್ಯುತ್ ಆಘಾತದಿಂದ ಮೃತಪಟ್ಟ ಘಟನೆ ಸಿದ್ದಾಪುರ ಕುಳ್ಳುಂಜೆ ಗ್ರಾಮದ ಭರತಕಲ್ಲು ಬಳಿ ನಡೆದಿದೆ.

ಪಶ್ಚಿಮ ಬಂಗಾಲ ಮೂಲದ ರಾಜೇಶ ಮಾಲ್ (24) ಮೃತಪಟ್ಟವರು.

ಹ್ಯಾಲೋಜನ್‌ ದೀಪವನ್ನು ಸ್ಪರ್ಶಿಸಿದ ಪರಿಣಾಮ ವಿದ್ಯುತ್ ಆಘಾತಕ್ಕೆ ಒಳಗಾದ ಅವರನ್ನು ಕೂಡಲೇ ಹಾಲಾಡಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಬದುಕಿಸಲು ಸಾಧ್ಯವಾಗಲಿಲ್ಲ.

ನಿರ್ಲಕ್ಷ್ಯ ತೋರಿದ ಸೈಟ್ ಎಂಜಿನಿಯರ್ ನಾಗರಾಜ ವಿರುದ್ಧ ಪಶ್ಚಿಮ ಬಂಗಾಲ ಮೂಲದ ಸಮರ್ ಮಾಲ್ ಅವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button