ಧಾರ್ಮಿಕ
ವಕ್ವಾಡಿ ದೇವರಾಡಿ ಶ್ರೀ ಬ್ರಹ್ಮಲಿಂಗೇಶ್ವರ ಹಾಗೂ ಸಪರಿವಾರ ಚಿಕ್ಕು ದೇವಸ್ಥಾನ, ಹಾಲು ಹಬ್ಬ ಮತ್ತು ಗೆಂಡ ಸೇವೆ

Views: 36
ಕುಂದಾಪುರ ತಾಲೂಕಿನ ವಕ್ವಾಡಿ ಗ್ರಾಮದ ತೆಂಕಬೆಟ್ಟು ದೇವರಾಡಿ ಶ್ರೀ ಬ್ರಹ್ಮಲಿಂಗೇಶ್ವರ ಹಾಗೂ ಸಪರಿವಾರ ಚಿಕ್ಕು ದೇವಸ್ಥಾನದಲ್ಲಿ ಹಾಲು ಹಬ್ಬ ಮತ್ತು ಗಂಡಸೇವೆ ಇಂದು ಮಾರ್ಚ್ 10 ಮತ್ತು 11ರಂದು ನಡೆಯಲಿದೆ.
ಮಾರ್ಚ್ 10 ರಂದು ಸಂಜೆ 7:30ಕ್ಕೆ ಹಾಲು ಹಬ್ಬ, ಗೆಂಡಸೇವೆ, ಅನ್ನ ಸಂತರ್ಪಣೆ
ಸಂಜೆ 7 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ‘ದಾನಿಗಳಿಗೆ ಸನ್ಮಾನ’
ರಾತ್ರಿ 9ಕ್ಕೆ ಉಡುಪಿ ಶ್ರೀ ಕೃಷ್ಣ ಕಲಾವಿದರು ಅಭಿನಯಿಸುವ ‘ಆ ದಿನದ ಮರುದಿನ‘ ನಾಟಕ ಪ್ರದರ್ಶನ ನಡೆಯಲಿದೆ.
ಮಾರ್ಚ್ 11 ಕ್ಕೆ ಢಕ್ಕೆ ಬಲಿ ಸೇವೆ, ತುಲಾಭಾರ ಸೇವೆ,ಹೂವು ಹಣ್ಣು ಕಾಯಿ ಸಮರ್ಪಣೆ, ಹರಕೆ ಸಮರ್ಪಣೆ, ಮಧ್ಯಾಹ್ನ 12:30ಕ್ಕೆ ಅನ್ನ ಸಂತರ್ಪಣೆ
ರಾತ್ರಿ 8:30ಕ್ಕೆ ಶ್ರೀ ಕ್ಷೇತ್ರ ಗೋಳಿಗರಡಿ ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.