ಕ್ರೀಡೆ

ರಾಷ್ಟ್ರ ಮಟ್ಟದ ಕರಾಟೆ – ಗ್ರಾಂಡ್ ಚಾಂಪಿಯನ್

Views: 36

ಕುಂದಾಪುರ : ಭಟ್ಕಳದಲ್ಲಿ ಅಮರ್ ಶಾ ಕರಾಟೆ ಮತ್ತು ಫಿಟ್ನೆಸ್ ಅಕಾಡೆಮಿ ಆಯೋಜಿಸಿದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕಂಡ್ಲೂರಿನ ಮೊಹಮ್ಮದ್ ಸಫಾನ್ ಕಾಝಿ ಕಟಾ ಹಾಗೂ ಕುಮಿಟೆ ಸ್ಪರ್ಧೆಯ 14 ವರ್ಷ ಒಳಗಿನ ವಯೋಮಾನದ ಬ್ರೌನ್ ಬೆಲ್ಟ್ ವಿಭಾಗದಲ್ಲಿ ಸ್ಪರ್ಧಿಸಿ ಚಿನ್ನದ ಪದಕ ಗೆದ್ದು, ಗ್ರಾಂಡ್ ಚಾಂಪಿಯನ್ ವಿಭಾಗದಲ್ಲೂ ಸ್ಪರ್ಧಿಸಿ ಅದರಲ್ಲಿ ಗ್ರಾಂಡ್ ಚಾಂಪಿಯನ್ ಆಗಿ ಹೊರಹೊಮ್ಮಿರುತ್ತಾರೆ.

ಇವರು ಆಯೋಜಕರು ಗ್ರಾಂಡ್ ಚಾಂಪಿಯನ್ ಟ್ರೋಫಿಯ ಜೊತೆಯಲ್ಲಿ ಒಂದು ಸೈಕಲ್ ಅನ್ನು ಕೂಡಾ ಬಹುಮಾನ ರೂಪದಲ್ಲಿ ನೀಡಿರುತ್ತಾರೆ.ಇವರು ಕಂಡ್ಲೂರಿನ ಜೀಯಾ ಪಬ್ಲಿಕ್ ಸ್ಕೂಲ್‌ನ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಶ್ರೀಮತಿ ಬಿಸ್ಮಿಲ್ಲಾ ಯಾಸ್ಮಿನ್ ಹಾಗೂ ಶೇಕ್ ಸಹೀದ್ ಮಕ್ಬುಲ್ ಇವರ ಪುತ್ರ. ಪ್ರಸ್ತುತ ಕೆ.ಡಿ.ಎಫ್. ಕರಾಟೆ ಅಂಡ್ ಫಿಟ್ನೆಸ್ ಅಕಾಡೆಮಿ, ಕುಂದಾಪುರ ಇಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದು, ಇವನಿಗೆ ಕರಾಟೆ ಶಿಕ್ಷಕರಾದ ಕಿರಣ್ ಕುಂದಾಪುರ, ಸಂದೀಪ್ ವಿ. ಕಿರಣ್ ಹಾಗೂ ಶಿಹಾನ್ ಶೇಕ್ ಇವರು ತರಬೇತಿ ನೀಡಿರುತ್ತಾರೆ.

Related Articles

Back to top button