ರಾಜಕೀಯ
ಯಾರು ಮನೆಯಲ್ಲಿಯೇ ಕೂತು ವೋಟ್ ಮಾಡಬಹುದು, ಚುನಾವಣಾ ಆಯುಕ್ತರು ಹೇಳಿದ್ದೇನು..?

Views: 60
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾತಾಡಿ ಹಿರಿಯ ಮತದಾರರು ಮನೆಯಲ್ಲೇ ಕೂತು ವೋಟ್ ಚಲಾವಣೆ ಮಾಡಬಹುದು ಎಂದಿದ್ದಾರೆ.
ಜಗತ್ತಿನ ಅತೀ ದೊಡ್ಡ ಮತದಾನಕ್ಕೆ ಭಾರತ ಸಿದ್ಧವಾಗಿದೆ. ಈ ಬಾರಿ 97 ಕೋಟಿಗೂ ಹೆಚ್ಚು ಜನ ಮತದಾನ ಮಾಡಲಿದ್ದಾರೆ. ಸುಮಾರು ಸುಮಾರು 11 ಲಕ್ಷ ಆಸುಪಾಸು ಮತಗಟ್ಟೆಗಳಲ್ಲಿ ವೋಟಿಂಗ್ ಆಗಲಿದೆ. 1.5 ಕೋಟಿ ಸಿಬ್ಬಂದಿ ಮತಗಟ್ಟೆ ನಿರ್ವಹಣೆ ಮಾಡಲಿದ್ದಾರೆ. ಈ ಬಾರಿ 49.7 ಕೋಟಿ ಪುರುಷ ಮತದಾರರು, 47.1 ಕೋಟಿ ಮಹಿಳಾ ಮತದಾರರು ಇದ್ದಾರೆ. 19 ಕೋಟಿಗೂ ಹೆಚ್ಚು ಯುವ ಮತದಾರರು ಇದ್ದು, 1.8 ಕೋಟಿ ಮತದಾರರು ಮೊದಲ ಬಾರಿಗೆ ವೋಟ್ ಮಾಡಲಿದ್ದಾರೆ ಎಂದರು.
ಅದರಲ್ಲೂ 48 ಸಾವಿರ ಮಂಗಳ ಮುಖಿ ವೋಟರ್ಸ್, 82 ಲಕ್ಷ 85 ವರ್ಷಕ್ಕೂ ಹೆಚ್ಚು ಮೇಲ್ಪಟ್ಟ ಮತದಾರರು, 2.18 ಲಕ್ಷ 100 ವರ್ಷ ಪೂರೈಸಿದವರು, 89 ಲಕ್ಷ ವಿಶೇಷ ಚೇತನ ಮತದಾರರು ಇದ್ದಾರೆ. ವಯಸ್ಸಾಗಿರೋರು ಮತ್ತು ವಿಶೇಷ ಚೇತನರು ಮನೆಯಲ್ಲೇ ಕೂತು ವೋಟ್ ಮಾಡಬಹುದು ಎಂದರು.