ಇತರೆ

ಬಂಟ್ವಾಳ: ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳಿಂದ ಪಿಕಪ್ ಚಾಲಕನ ಬರ್ಬರ ಹತ್ಯೆ   

Views: 464

ಕನ್ನಡ ಕರಾವಳಿ ಸುದ್ದಿ: ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳಿಂದ ಪಿಕಪ್ ಚಾಲಕನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುರಿಯಾಳ ಸಮೀಪದ ಕಾಂಬೋಡಿಯ ಇರಾಕೋಡಿ ಎಂಬಲ್ಲಿ ಇಂದು ನಡೆದಿದೆ.

ಕೊಳತ್ತಮಜಲು ನಿವಾಸಿ ರಹೀಮ್ ಎಂಬಾತ ಕೊಲೆಗೀಡಾದವರು ಎಂದು ಪೊಲೀಸರು ತಿಳಿಸಿದ್ದಾರೆ.

ಈತ ಇರಾಕೋಡಿ ಎಂಬಲ್ಲಿ ಮರಳು ಅನ್ ಲೋಡ್ ಮಾಡುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಡಿದು ಪರಾರಿಯಾಗಿದ್ದಾರೆ.

ರಹೀಮ್ ಜೊತೆ ಇನ್ನೊಬ್ಬ ಕೂಡ ಇದ್ದು, ಆತನಿಗೂ ಕಡಿಯಲಾಗಿದೆ. ಆದರೆ ಆತನಿಗೆ ಕೈಗೆ ಗಾಯ ವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸರು ಭೇಟಿ ನೀಡಿದ್ದಾರೆ.

Related Articles

Back to top button