ಇತರೆ
ಕೋಟೇಶ್ವರ: ಬೀಜಾಡಿಯಲ್ಲಿ ಹೆಲ್ಮೆಟ್ ಧರಿಸದೇ ಬೈಕ್‌ನಲ್ಲಿ ನಾಲ್ವರ ಪ್ರಯಾಣ:ಎಕ್ಸ್’ ನಲ್ಲಿ ನೋಡಿ ಕೇಸು

Views: 149
ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರದ ಬೀಜಾಡಿ ಮಲ್ನಾಡ್ ಕೆಫೆ ಹತ್ತಿರ ಬೈಕ್‌ನಲ್ಲಿ ಹೆಲ್ಮೆಟ್ ಧರಿಸದೇ ನಾಲ್ವರು ಪ್ರಯಾಣಿಸುತ್ತಿದ್ದವರನ್ನು ಎಕ್ಸ್ ಖಾತೆ ನೋಡಿ ಪೊಲೀಸರು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸರ ಎಕ್ಸ್ (ಟ್ವಿಟರ್) ಖಾತೆಗೆ ಸಾರ್ವಜನಿಕರೊಬ್ಬರು ಟ್ಯಾಗ್ ಮಾಡಿದ ಮಾಹಿತಿಯಂತೆ ಬೈಕ್‌ನಲ್ಲಿ ನಾಲ್ವರನ್ನು ಕೂರಿಸಿ, ಹೆಲ್ಮೆಟ್ ಧರಿಸದೇ ಹೋಗುತ್ತಿದ್ದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದೆ.
ಸಂಚಾರ ನಿಯಮಕ್ಕೆ ವಿರುದ್ಧವಾಗಿ ಬೈಕ್ ಸವಾರಿ ಮಾಡಿಕೊಂಡು ಒಂದನ್ನು ಪೋಸ್ಟ್ ಮಾಡಿ ಉಡುಪಿ ಪೊಲೀಸ್ ಎಕ್ಸ್‌ಖಾತೆಗೆ ಟ್ಯಾಗ್ ಮಾಡ ಲಾಗಿತ್ತು. ಕುಂದಾಪುರ ಸಂಚಾರ ಠಾಣೆ ಎಸ್‌ಐ ಪ್ರಸಾದ್ ಕುಮಾರ ಅವರು ಪರಿಶೀಲಿಸಿ ನಾಲ್ವರನ್ನು ಬಂಧಿಸಿದ್ದಾರೆ.