ಇತರೆ
ಕುಂಭಾಸಿ:ಒಂದೂವರೆ ವರ್ಷದ ಹಿಂದೆ ಅಪಘಾತದಲ್ಲಿ ಗಾಯಾಳು ಆತ್ಮಹತ್ಯೆ

Views: 89
ಕುಂದಾಪುರ: ಒಂದೂವರೆ ವರ್ಷದ ಹಿಂದೆ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಕುಂಭಾಶಿ ಜನತಾ ಕಾಲನಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಕೃಷ್ಣ (50) ಅವರು ಮನೆಯಲ್ಲಿ ಯಾರೂ ಇಲ್ಲದಿದ್ದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ.ಜ. 2ರಂದು ನಡೆದಿದೆ
ಪತ್ನಿ ಸುಶೀಲಾ ಮಗುವನ್ನು ಶಾಲೆಗೆ ಬಿಡಲು ತೆರಳಿದ್ದರು. ಮರಳಿ ಬರುವಷ್ಟರಲ್ಲಿ ಪತಿ ನೇಣು ಬಿಗಿದುಕೊಂಡಿದ್ದರು. ತತ್‌ಕ್ಷಣ ನೆರೆಮನೆಯವರ ಸಹಾಯದಿಂದ ಹಗ್ಗ ಬಿಡಿಸಿ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಪರೀಕ್ಷಿಸಿದ ವೈದ್ಯರು ಅದಾಗಲೇ ಸಾವನ್ನಪ್ಪಿರುವುದಾಗಿ ತಿಳಿಸಿದರು.
ಸಹೋದರ ಬಸವ ತೆಕ್ಕಟ್ಟೆ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.