ಇತರೆ
ಕುಂದಾಪುರ: ಕೋಟೇಶ್ವರದಲ್ಲಿ ಅಂಗಡಿ ಕೆಲಸಕ್ಕೆ ತೆರಳಿದ್ದ ಕುಂಬ್ರಿಯ ಯುವತಿ ನಾಪತ್ತೆ

Views: 349
ಕುಂದಾಪುರ: ಕೋಟೇಶ್ವರದ ಅಂಗಡಿಯೊಂದರಲ್ಲಿ ಕೆಲಸಕ್ಕೆ ಇದ್ದ ಯುವತಿಯೊಬ್ಬಳು ಬೆಳಿಗ್ಗೆ ಕೆಲಸಕ್ಕೆ ತೆರಳಿದ್ದು, ಆ ಬಳಿಕ ಇನ್ನೂ ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ.
ಕೋಟೇಶ್ವರ ಗ್ರಾಮದ ಕುಂಬ್ರಿ ನಿವಾಸಿ ರಾಮ ಮೊಗವೀರ ಅವರ ಪುತ್ರಿ ವೈಷ್ಣವಿ (19) ನಾಪತ್ತೆಯಾದ ಯುವತಿ ಎಂದು ತಿಳಿದುಬಂದಿದೆ.
ಈಕೆಯ ತಾಯಿ ಯಶೋದಾ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.