ಇತರೆ

ಕಾರ್ಕಳ ಶಾಸಕ ಸುನಿಲ್ ಕುಮಾ‌ರ್ ಸಹೋದರ ನಿಧನ

Views: 196

ಕನ್ನಡ ಕರಾವಳಿ ಸುದ್ದಿ: ಕಾರ್ಕಳ ಶಾಸಕ ಸುನಿಲ್ ಕುಮಾ‌ರ್ ಅವರ ಹಿರಿಯ ಸಹೋದರ ಕಾರ್ಕಳ ನೆಕ್ಲಾಜೆಯ ಸುಜಿತ್ ಕುಮಾರ್(53) ಅವರು ಶುಕ್ರವಾರ ಬೆಳಗ್ಗೆ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕಳೆದ ಹಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕಳೆದ ಎರಡು ವಾರಗಳ ಹಿಂದೆ ಉಡುಪಿಯ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ನಿಧನರಾಗಿದ್ದಾರೆ. ಮೃತರು ಶಾಸಕ ಸುನಿಲ್‌ ಕುಮಾ‌ರ್ ಸೇರಿದಂತೆ ತಂದೆ, ತಾಯಿ, ಸಹೋದರಿ,ಪತ್ನಿ ಹಾಗೂ ಇಬ್ಬರು ಪುತ್ರಿಯರು ಹಾಗೂ ಬಂಧುವರ್ಗವನ್ನು ಅಗಲಿದ್ದಾರೆ.

Related Articles

Back to top button