ಇತರೆ

ಕಾರು ಚಾಲಕನ ಜತೆ ಓಡಿ ಹೋಗಲು ಸಿದ್ಧತೆ ಮಾಡಿದಾಗ ಆಕ್ಷೇಪ: ಅಪ್ರಾಪ್ತ ಬಾಲಕಿ ಆತ್ಮಹತ್ಯೆ 

Views: 106

ಅಪ್ರಾಪ್ತ ಬಾಲಕಿಯೊಬ್ಬಳು ಕಾರು ಚಾಲಕನ ಜತೆ ಪ್ರೀತಿ-ಪ್ರೇಮ-ಪ್ರಣಯದಲ್ಲಿ ತೊಡಗಿದ್ದು, ಇದೀಗ ಪ್ರಾಣ ಕಳೆದುಕೊಂಡಿದ್ದಾಳೆ. ಹೆತ್ತವರು  ಪ್ರೀತಿಯನ್ನು ಆಕ್ಷೇಪಿಸಿದ್ದು, ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದ ಘಟನೆ ನಡೆದಿದೆ. ಆತ್ಮಹತ್ಯೆಗೆ ಒಳಗಾದ ಅಪ್ರಾಪ್ತ ಬಾಲಕಿ ಸಂಗೀತಾ (17) ಎಂದು ತಿಳಿದುಬಂದಿದೆ.

ಸಂಗೀತಾಗೆ ಕಾರು ಚಾಲಕ ಕೃಷ್ಣ ಎಂಬ ಯುವಕನ ಜೊತೆ ಪ್ರೀತಿ-ಪ್ರೇಮ ಇತ್ತು. ಆಕೆ ಈ ಹಿಂದೆ ಎರಡು ಬಾರಿ ಕೃಷ್ಣನ ಜೊತೆಯಾಗಿ ಮನೆಬಿಟ್ಟಿದ್ದಳು. ಬಳಿಕ ಬುದ್ಧಿವಾದ ಹೇಳಿ ಮನೆಗೆ ಕರೆ ತರಲಾಗಿತ್ತು.

ಇದೀಗ ಮತ್ತೊಮ್ಮೆ ಆಕೆ ಚಾಲಕನ ಜತೆ ಓಡಿ ಹೋಗಲು ಸಿದ್ಧತೆ ಮಾಡಿದಾಗ ಮನೆಯವರು ಆಕೆಯನ್ನು ತಡೆದಿದ್ದರು. ಇದರಿಂದ ಮನನೊಂದ ಆಕೆ ಮನೆಯಲ್ಲಿ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ

ಮನೆಯಲ್ಲಿದ್ದ ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸಂಗೀತಾ ಮೃತದೇಹವನ್ನು ಮಾನ್ವಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related Articles

Back to top button